ನೆಲಕಚ್ಚಿದ ಕಿಂಗ್ ಫಿಷರ್ ಹಾರಾಟ, ಕೈ ಕಚ್ಚಿಕೊಂಡ ಮಲ್ಯ

ಗುರುವಾರ(ನ.10) ಸುಮಾರು 80 ವಿಮಾನಗಳು ಕ್ಯಾನ್ಸಲ್ ಆದಾಗ ಮಲ್ಯ ಕಂಗಾಲಾಗಿದ್ದರು. ನೂರಾರು ಜನ ಪೈಲಟ್ ಗಳು ಸಂಬಳ ಸಿಗಲಿಲ್ಲ ಎಂದು ನೆಪವೊಡ್ಡಿ ಸಂಸ್ಥೆ ಬಿಟ್ಟು ಹೊರ ನಡೆದಿದ್ದಾರೆ.
ಪ್ರಯಾಣಿಕರಿಗೆ ತೊಂದರೆ ಕೊಡುತ್ತಿರುವ ಕಿಂಗ್ ಫಿಷರ್ ಗೆ Directorate General of Civil Aviation (DGCA) ಶೋಕಾಸ್ ನೋಟಿಸ್ ನೀಡಿದೆ. ಪ್ರಯಾಣಿಕರಿಗೆ ವಿಮಾನ ಟಿಕೆಟ್ ದರ ವಾಪಾಸ್ಸಾತಿ, ಪರ್ಯಾಯ ವ್ಯವಸ್ಥೆ ಕಲ್ಪಿಸಲು ಡಿಜಿಸಿಎ ಸೂಚಿಸಿದೆ.
ಮಲ್ಯ ಕಂಗಾಲು: ಶ್ರೀಮಂತ ಕುಳ ಮಲ್ಯ ತಲೆ ಮೇಲೆ 7057 ಕೋಟಿ ರೂ ಸಾಲವನ್ನು ಕಿಂಘ್ ಫಿಷರ್ ವಿಮಾನಯಾನ ಎತ್ತಿ ಹಾಕದೆ. HPCL ಇಂಧನ ಪೂರೈಕೆ ವ್ಯತ್ಯಯದಿಂದ ಆರಂಭವಾದ ತೊಂದರೆ ಕಿಂಗ್ ಫಿಷರ್ ಗೆ ಮುಳುವಾಗಿದೆ. ಕಿಂಗ್ ಫಿಷರ್ ಬಹುತೇಕ ಹಾರುವ ಶಕ್ತಿಯನ್ನು ಕಳೆದುಕೊಂಡಿದೆ.












Click it and Unblock the Notifications