ಬೆಂಗಳೂರು ಕಾರ್ಪೊರೇಟರುಗಳಿಗೆ ಲ್ಯಾಪ್‌ಟಾಪ್ ಕೊಡುಗೆ

'BBMP, ಪಕ್ಷಾತೀತವಾಗಿ ಎಲ್ಲ ಕಾರ್ಪೊರೇಟರುಗಳಿಗೂ ತಲಾ 30-50 ಸಾವಿರ ರುಪಾಯಿ ವೆಚ್ಚದಲ್ಲಿ ಲ್ಯಾಪ್‌ಟಾಪ್‌ಗಳನ್ನು ಖರೀದಿಸುವ ನಿರ್ಣಯ ಕೈಗೊಳ್ಳಲಾಗಿದೆ. ಕಾರ್ಪೊರೇಟರುಗಳ ಜತೆಗೆ ಕೆಲವು ಹಿರಿಯ ಅಧಿಕಾರಿಗಳಿಗೂ ಲ್ಯಾಪ್‌ಟಾಪ್ ದಯಪಾಲಿಸಲು ನಿರ್ಧರಿಸಲಾಗಿದೆ' ಎಂದು ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ಜಿ. ಮಂಜುನಾಥ್ ರಾಜು ತಿಳಿಸಿದ್ದಾರೆ.
ಮುಂದಿನ ಬಜೆಟ್ ವೇಳೆಗೆ ಲ್ಯಾಪ್‌ಟಾಪ್ ಮೂಲಕವೇ ಇಡೀ ಬಜೆಟ್ ಅನ್ನು ಕಳಿಸುವ ಸಾಧ್ಯತೆ ಇದೆ. ಇದರಿಂದ ಅನಗತ್ಯ ಪೇಪರ್ ವರ್ಕ್, ಪ್ರಿಂಟಿಂಗ್ ವೆಚ್ಚ ಎಲ್ಲ ಉಳಿತಾಯ ಮಾಡಬಹುದು ಎಂದು ಅವರು ಹೇಳಿದರು.
'ಇದು ನಿಜಕ್ಕೂ ಸ್ವಾಗತಾರ್ಹ ನಿರ್ಧಾರ. BBMP ನಿರ್ಧಾರ ಶ್ಲಾಘನೀಯ. ಈ ಐಟಿ ಟ್ಯಾಗ್ ಧರಿಸಲು ಬೆಂಗಳೂರು ಅರ್ಹವಾಗಿದೆ' ಎಂದು ಸಿವಿ ರಾಮನ್ ನಗರದ ಕಾರ್ಪೊರೇಟರ್ ಎಂ ಕೃಷ್ಣಪ್ಪ ಪ್ರತಿಕ್ರಿಯಿಸಿದ್ದಾರೆ. ಬಹಳಷ್ಟು ಕಾರ್ಪೊರೇಟರುಗಳು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications