ಸ್ವಾಭಿಮಾನಿ ಶ್ರೀರಾಮುಲು ಆಸ್ತಿ 45 ಕೋಟಿ ರೂ.
ಬಳ್ಳಾರಿ,
ನ. 10: ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗಣಿ ದೊರೆ ಜನಾರ್ದನ ರೆಡ್ಡಿ ಅವರ ಅತ್ಯಾಪ್ತ, ಮಾಜಿ ಸಚಿವ ಬಿ. ಶ್ರೀರಾಮುಲು ಸುಮಾರು 45 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. id="toptextpromo">ಬುಧವಾರ
ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾಧಿಕಾರಿಗೆ ನೀಡಿರುವ ಆಸ್ತಿ ದೃಢೀಕರಣ ಪತ್ರದಲ್ಲಿ ಶ್ರೀರಾಮುಲು ಈ ಆಸ್ತಿ ವಿವರ ಅಫಿಡವಿಟ್ ಸಲ್ಲಿಸಿದ್ದಾರೆ.ರಾಮುಲು ಬಳಿ 58,98,229 ರೂ. ನಗದು ಹಣವಿದ್ದರೆ ಅವರ ಪತ್ನಿ ಭಾಗ್ಯಲಕ್ಷಿ ಬಳಿ ಕೇವಲ 95,600 ರೂ. ಇದೆಯಂತೆ. id='are-slot-1' class='oiad oi-axt oiadv'> id='top-searched-articles'>ಶ್ರೀರಾಮುಲು
ಬಳಿ 27.72 ಕೋಟಿ ಚರಾಸ್ತಿ, 9.68 ಕೋಟಿ ರೂ ಸ್ಥಿರಾಸ್ತಿ ಇದೆ. ಅವರ ಪತ್ನಿ ಭಾಗ್ಯಲಕ್ಷಿ 5 ಕೋಟಿ ರೂ. ಚರಾಸ್ತಿ ಮತ್ತು 2 ಕೋಟಿ ರೂ. ಸ್ಥಿರಾಸ್ತಿ ಇದೆ. ಜತೆಗೆ 40 ಲಕ್ಷ ರೂ. ಬೇರೆ ಕಡೆಗಳಲ್ಲಿ ಹೂಡಿಕೆ ಮಾಡಿದ್ದು, ಸುಮಾರು 6.6 ಕೋಟಿ ರು ಮೌಲ್ಯದ ನಾನಾ ಬಾಂಡ್ ಹೂಡಿಕೆಗಳನ್ನೂ ಮಾಡಿದ್ದಾರೆ.











Click it and Unblock the Notifications