ಇವರ ಪ್ರೇಮ ಸಾಹಸಕ್ಕೆ ದೂರದಿಂದಲೇ ಶರಣು ಎನ್ನೋಣ!

ಆದರೆ ಅದು ಖಂಡಿತಾ ಪಿಕ್ನಿಕ್ ಸ್ಪಾಟ್ ಅಲ್ಲ. ಅಂತಹುದರಲ್ಲಿ ಆ ಯುವ ಜೋಡಿ ತಮ್ಮ ಪ್ರೇಮದಾಟಕ್ಕೆ ಆರಿಸಿಕೊಂಡಿದ್ದು ಇದೇ ಸ್ಥಳವನ್ನು. ಅಲ್ಲಿಗೆ ತೆರಳಿ (ತೆವಳಿಕೊಂಡು ಹೋಗಿ) ಅದೇನು ಮಾಡಿತೋ ಆ ಪ್ರೇಮ ದೇವತೆಯೇ ಬಲ್ಲ. ಆದರೂ ಅವರ ಸ್ವಚ್ಚಂದ ರಸಿಕತೆಗೆ ನಮೋನಮಃ ಎಂದಿದೆ ಪಾಗಲ್ ದುನಿಯಾ!
ಮೈಕೇಲ್ ಮ್ಯಾಥ್ಯೂಸ್ (54) ಎಂಬ ಹವ್ಯಾಸಿ ಫೋಟೋಗ್ರಾಫರ್ ಇದನ್ನು ಅಚಾನಕ್ಕಾಗಿ ಈ ದೃಶ್ಯಗಳನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾನೆ. 'ಆ ಪಾಗಲ್ ಜೋಡಿ ಅಲ್ಲಿ 5-10 ನಿಮಿಷವಿತ್ತು. ಒಬ್ಬರಿಗೊಬ್ಬರು ಅಪ್ಪಿಮುದ್ದಾಡಿದರು. ಕಿಸ್ ಕೊಟ್ಟುಕೊಂಡರು. ಆದರೆ ಸ್ವಯಂ ಕಟ್ಟೆಚ್ಚರದ ನಡುವೆಯೇ ಇದನ್ನೆಲ್ಲ ಮಾಡಿ ಮುಗಿಸಿದರು. ಅದನ್ನೆಲ್ಲ ನನ್ನ ಕ್ಯಾಮರಾ ದಾಖಲಿಸಿಕೊಂಡಿತು' ಎಂದು ಮ್ಯಾಥ್ಯೂಸ್ ತಿಳಿಸಿದ್ದಾರೆ.
'ಆಕಾಶದಲ್ಲಿ ನೇತಾಡುತ್ತಿದ್ದ ಹಾಸಿಗೆಯಂತೆ ಅವರಿಗೆ ಅನಿಸಿರಬೇಕು. ಪ್ರೇಮ ಪರಾಕಾಷ್ಠೆ ತಲುಪಿದ್ದ ಅವರು ಆ ಬಂಡೆಯ ತುತ್ತತುದಿಗೆ ತಲುಪಿದಾಗ ಎಲ್ಲಿ ಗಾಳಿಗೆ ಹಾರಿಹೋಗುತ್ತಾರೋ ಎಂದು ನನಗೆ ಭಯವಾಯಿತು. ಕಿಬ್ಬೊಟ್ಟೆಯಿಂದ ತಳಮಳ ಶುರುವಾಯಿತು. ಅಲ್ಲಿಂದ ಬಿದ್ದರೆ ದೇವರೇ ಗತಿ. ಆದರೂ ಅವರ ಧೈರ್ಯಕ್ಕೆ ಶರಣು ಎನ್ನೋಣ' ಎಂದು ಮ್ಯಾಥ್ಯೂಸ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications