ಜಗನ್, ಗಾಲಿ ರೆಡ್ಡಿ ಬಳಿ ಇದೆ ಚಿನ್ನದ ಶೌಚಗುಂಡಿ!

ಆದರೆ, ತೆಲುಗುದೇಶಂ ಪಾರ್ಟಿಯ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಮಾತ್ರ ರೆಡ್ಡಿಗಳು ದಿನನಿತ್ಯ ನಿತ್ಯಕರ್ಮ ತೀರಿಸಿಕೊಳ್ಳಲು ಚಿನ್ನದ ಕಮೋಡ್ ಬಳಸುತ್ತಾರೆ. ನನಗೆ ಜಗನ್ ರೀತಿ ಬಂಗಲೆ ಇಲ್ಲ, ಗಾಲಿ ರೆಡ್ಡಿ ರೀತಿ ಚಿನ್ನದ ಸಿಂಹಾಸನ ಇಲ್ಲ, ಮೂರು ಬೆಡ್ ರೂಮ್ ಮನೆ ಮಾತ್ರ ಇದೆ.
ನನ್ನ ಆಸ್ತಿ ವಿವರಗಳನ್ನು ಈಗಾಗಲೆ ಬಹಿರಂಗಪಡಿಸಿದ್ದೇನೆ. ಹೆಚ್ಚಿಗೆ ಆಸ್ತಿ ಏನಾದರೂ ಕಂಡು ಬಂದರೆ ಅದನ್ನು ಅವರಿಬ್ಬರ ಹೆಸರಿಗೆ ಬರೆಯುತ್ತೇನೆ ಎಂದು ನಾಯ್ಡು ಹೇಳಿದ್ದಾರೆ.
ಜಗನ್ ಕುತಂತ್ರಿ: ಸಿಬಿಐ ತಂಡಕ್ಕೆ ಹಳೆ ಸರ್ಕಾರದ ಸುತ್ತೋಲೆಗಳನ್ನು(GO)ಗಳನ್ನು ನೀಡಿ ಯಾಮಾರಿಸಿರುವ ಜಗನ್, ಸಿಕ್ಕಿಬೀಳುತ್ತಾನೆ.
ಅಕ್ರಮ ಗಣಿಗಾರಿಕೆ ವಿರುದ್ಧ ಟಿಡಿಪಿ ಹೊರಡಿಸಿರುವ ಪುಸ್ತಕದಲ್ಲಿರುವ ಮಾಹಿತಿಯನ್ನು ಕದ್ದು ಸರ್ಕಾರದ ಆದೇಶ ಎಂದು ಸಿಬಿಐಗೆ ಜಗನ್ ನೀಡಿದ್ದಾನೆ. ವೈಎಸ್ ರಾಜಶೇಖರ ರೆಡ್ಡಿ ಅಧಿಕಾರಾವಧಿಯಲ್ಲಿ ನಡೆದ ಅಕ್ರಮಗಳನ್ನು ನನ್ನ ತಲೆಗೆ ಕಟ್ಟಲು ಯತ್ನಿಸಲಾಗುತ್ತಿದೆ ಇದಕ್ಕೆ ಸರಿಯಾದ ಉತ್ತರ ನೀಡುತ್ತೇನೆ ಎಂದು ನಾಯ್ಡು ಗುಡುಗಿದ್ದಾರೆ.












Click it and Unblock the Notifications