ಎಂಎಂ ಸಿಂಗ್ ಗಿಂತ ಸೋನಿಯಾಜಿ ಪ್ರಭಾವಿಯಂತೆ!

ಫೋರ್ಬ್ಸ್ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ನಂ.1 ಸ್ಥಾನ ಪಡೆದಿದ್ದಾರೆ. ಲಾಡೆನ್ ಮತ್ತು ಗಡ್ಡಾಫಿ ವಿರುದ್ಧದ ಹೋರಾಟದಲ್ಲಿ ಅಮೆರಿಕ ಪಡೆದ ಯಶಸ್ಸು ಒಬಾಮಾ ಅವರನ್ನು ಈ ಸ್ಥಾನಕ್ಕೇರಿಸಿದೆ. ಆರ್ಥಿಕ ನೀತಿ, ನಿರುದ್ಯೋಗ ಸಮಸ್ಯೆಯತ್ತ ಒಬಾಮಾ ಕೈಗೊಂಡ ಕ್ರಮ ಮೆಚ್ಚುಗೆ ಪಾತ್ರವಾಗಿದೆ.
ಸೋನಿಯಾ ಅವರು ಈ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ 19ನೇ ಸ್ಥಾನದಲ್ಲಿದ್ದಾರೆ.
ಸೋನಿಯಾಗೆ ಪ್ರಧಾನಿಯಾಗುವ ಅವಕಾಶವನ್ನು ಎರಡು ಬಾರಿ ನಿರಾಕರಿಸಿ ಅದನ್ನು ಪ್ರಧಾನಿ ಮನಮೋಹನ್ ಸಿಂಗ್‌ಗೆ ಒಪ್ಪಿಸಿದ ವಿಶಿಷ್ಟ ಸ್ವಭಾವದ ರಾಜಕಾರಣಿ ಎಂದು ಮತ್ತೊಮ್ಮೆ ಅವರನ್ನು ಕೊಂಡಾಡಲಾಗಿದೆ.
ಮನಮೋಹನ್ ಅವರ ಮೇಲೆ 2ಜಿ ಹಗರಣದ ಆರೋಪವಿದ್ದರೂ ಅವರೊಬ್ಬ ಭ್ರಷ್ಟಾಚಾರ ರಹಿತ, ಸಚಾರಿತ್ರ್ಯದ ಆರ್ಥಿಕ ತಜ್ಞ ಎಂದು ಹೊಗಳಲಾಗಿದೆ.
ಕಳೆದ ಬಾರಿ ಎರಡನೆ ಸ್ಥಾನ ಪಡೆದಿದ್ದ ಚೀನಾದ ಅಧ್ಯಕ್ಷ ಹು ಜಿಂಟಾವೋ ಈ ಬಾರಿ ಮೂರನೇ ಸ್ಥಾನ ಪಡೆದಿದ್ದಾರೆ. ಎರಡನೆ ಸ್ಥಾನದಲ್ಲಿ ರಷ್ಯಾದ ವ್ಲಾದಿಮಿರ್ ಪುಟಿನ್ ಕಾಣಿಸಿಕೊಂಡಿದ್ದಾರೆ.












Click it and Unblock the Notifications