ಸ್ತ್ರೀ ಪೀಡನೆ: ಸಾಕ್ಷರ ಕೇರಳ ದೇಶಕ್ಕೇ 'ಮಾದರಿ'!

ವಿದ್ಯಾಭ್ಯಾಸ ಮತ್ತು ಕುಟುಂಬದ ಆರ್ಥಿಕ ಸ್ಥಿತಿಗತಿಗೂ ಸ್ತ್ರೀ ಪೀಡನೆಗೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ಎಂದು ಕೇರಳದಲ್ಲಿ ಸಾಬೀತಾಗಿದೆ. ಯಾಕೆಂದರೆ ಹೆಂಡತಿಯರನ್ನು ಪೀಡಿಸುವವರಲ್ಲಿ ಬಹುತೇಕ ಮಂದಿ ಉತ್ತಮ ಶಿಕ್ಷಣ ಹೊಂದಿದವರೇ.
ಕೈತುಂಬ ಸಂಬಳ ಪಡೆದುಕೊಳ್ಳುವ ಸರಕಾರಿ ಮತ್ತು ಖಾಸಗಿ ನೌಕರರು, ವೈದ್ಯರು, ಇಂಜಿನಿಯರುಗಳಂತಹ ಉನ್ನತ ವೃತ್ತಿಪರರು ಕೂಡ ಹೆಂಡತಿಯನ್ನು ಹಿಂಸಿಸುವುದರಲ್ಲಿ ಹಿಂದೆ ಬಿದ್ದಿಲ್ಲ.
ಅಂತೆಯೇ ಕೇರಳದಲ್ಲಿ ವೃದ್ಧರ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ. ವೃದ್ಧ ಸಂಖ್ಯೆ ರಾಷ್ಟ್ರೀಯ ಸರಕಾಸರಿ ಶೇ.7 ಇದ್ದರೆ ಕೇರಳದಲ್ಲಿ ಇದರ ಇಮ್ಮಡಿಗಿಂತಲೂ ಹೆಚ್ಚು ಅಂದರೆ ಶೇ. 15 ಇದೆ. ವೃದ್ಧ ಮಹಿಳೆಯರನ್ನು ಸಂರಕ್ಷಿಸುವುದು ಭವಿಷ್ಯದಲ್ಲಿ ಮಹಿಳಾ ಆಯೋಗದ ಪಾಲಿಗೊಂದು ಸವಾಲಾಗಿ ಪರಿಣಮಿಸಲಿದೆ ಎಂದು ಮುನೀರ್ ಹೇಳಿದ್ದಾರೆ.












Click it and Unblock the Notifications