ಕೇರಳ ಮಾಜಿ ಮುಖ್ಯಮಂತ್ರಿ ಅಚ್ಯುತಾನಂದನ್ ವಿಕೃತಕಾಮಿ

ಈ ಮಧ್ಯೆ, ಗಣೇಶ್ ಟೀಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಅಸಭ್ಯ ಹೇಳಿಕೆ ನೀಡಿರುವ ಗಣೇಶ್ ಕುಮಾರ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿ ಎಡಪಕ್ಷಗಳು ಭಾರೀ ಕೋಲಾಹಲವನ್ನೇ ಎಬ್ಬಿಸಿವೆ.
ಗಣೇಶ್ ಯಾಕಪ್ಪಾ ಇಷ್ಟೊಂದಯ ಗರಂ ಆದರು ಅಂದರೆ 'ಶಿಕ್ಷಕಿಯೊಬ್ಬರ ಮೇಲಿನ ಹಲ್ಲೆ ಪ್ರಕರಣದಲ್ಲಿ ಗಣೇಶ್ ಕುಮಾರರನ್ನು ಅಚ್ಯುತಾನಂದನ್ ಆರೋಪಿ ಎಂದಿದ್ದೇ ತಡ ಅಚ್ಯುತಾನಂದನರನ್ನು ಗಣೇಶ್ ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. 'ಅಚ್ಯುತಾನಂದನ್‌ಗೆ ಅರಳು ಮರುಳಾದಂತಾಗಿದೆ. ಹೀಗಾಗಿ ಅವರು ನನ್ನ ವಿರುದ್ಧ ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ. ಅವರೊಬ್ಬ ಕಾಮಪಿಪಾಸು' ಎಂದು ಜರಿದಿದ್ದಾರೆ.
ಇಷ್ಟೇ ಸಾಲದು ಅಂತ 'ಅಚ್ಯುತಾನಂದನ್ ದಗಾಕೋರ' ಎಂದು ಗಣೇಶ್ ಇಡೀ ಊರಿನಲ್ಲೆಲ್ಲಾ ಹೇಳಿಕೊಂಡು ಬರುತ್ತಿದ್ದಾರೆ. 'ಅಚ್ಯುತಾನಂದರ ಮಗ ಅರುಣ್‌ಕುಮಾರ್ ಸಹ ಮಹಾವಂಚಕ. ಶೀಘ್ರವೇ ಅರುಣ್ ಜೈಲು ಸೇರಲಿದ್ದಾರೆ. ಇದನ್ನು ನೋಡಿ ಅಚ್ಯುತಾನಂದನ್ ಕಣ್ಣೀರು ಸುರಿಸುವ ದಿನಗಳು ದೂರವಿಲ್ಲ' ಎಂದು ಗಣೇಶ್‌ಕುಮಾರ್ ವ್ಯಂಗ್ಯವಾಡಿದರು.












Click it and Unblock the Notifications