ಬೆಂಗಳೂರಿನಲ್ಲಿ ಏನೂ ಆಗ್ತಿಲ್ಲ, ಸಖತ್ ಬೋರು

Bangalore wears Lazy Looks
ಢಂ ಢಂ ಪಟಾಕಿಗಳ ಸದ್ದು ಅಡಗಿರುವುದು ಈ ದೀಪಾವಳಿಯ ವಿಶೇಷ. ದುಡ್ಡಿನ ಅಭಾವವೋ ಅಥವಾ ಪಟಾಕಿ ಸುಡುವುದರಿಂದ ಪ್ರಯೋಜನವಿಲ್ಲ ಎಂಬ ಅರಿವು ಮೂಡಿದೆಯೋ, ಕುತೂಹಲಕರ.

ಕಿವಿ ತೂತು ಬಿದ್ದುಹೋಗುವಷ್ಟು ಸದ್ದು ಕೇಳಿಸದಿದ್ದರೆ ಅದು ದೀಪಾವಳಿಯೇ ಅಲ್ಲ ಎನ್ನುವಷ್ಟು ಆರ್ಭಟ ಬೆಂಗಳೂರಿನಲ್ಲಿ ಇರುತ್ತಿತ್ತು. ಆದರೆ ಈ ಸಲ ಹಾಗಿಲ್ಲ. ಪಟಾಕಿ ಅಂಗಡಿ ಇಟ್ಟ ಎಷ್ಟೋ ವ್ಯಾಪಾರಿಗಳಿಗೆ ಕೈ ಸುಟ್ಟಿರುವುದಂತೂ ನಿಜ. ಒಟ್ಟಾರೆ ಬೆಂಗಳೂರು ಡಲ್ ಹೊಡಿತಾ ಇದೆ. ಸಖತ್ ಬೋರು.

ಹೊಸೂರು ರಸ್ತೆಯಲ್ಲಿ ಪಟಾಕಿ ಮಳಿಗೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಶೇ.50 ರಷ್ಟು ಕಡಿಮೆ ವ್ಯಾಪಾರ. "60 ಲಕ್ಷ ಬಂಡವಾಳ ಹಾಕಿ ಪಟಾಕಿ ಸ್ಟಾಕ್ ಮಾಡಿದ್ದೆ. ಇವತ್ತಿನವರೆಗೆ ಕೇವಲ 28 ಲಕ್ಷ ಮೌಲ್ಯದ ಪಟಾಕಿ ಮಾರಾಟವಾಗಿದೆ" ಎಂದು ಅಭಿನಯ್ ಕ್ರ್ಯಾಕರ್ ಸ್ಟೋರ್ಸ್ ನ ಶಿವಶಂಕರ್ ಹೇಳುತ್ತಾರೆ.

ಜಯನಗರ 7 ನೇ ಬ್ಲಾಕಿನ ಕಾರ್ಪೋರೇಷನ್ ಮೈದಾನದಲ್ಲಿ ಎದ್ದಿರುವ ಪಟಾಕಿ ಅಂಗಡಿ ಮುಂಗಟ್ಟುಗಳ ಹಣೆಬರಹವೂ ಅಷ್ಟೆ. ನರಕ ಚತುರ್ದಶಿ ದಿವಸ ಸಾಯಂಕಾಲ ಮಳೆ ಬಂತಲ್ಲ.

"ಸಣ್ಣ ಸಣ್ಣ ಮಕ್ಕಳಿರುವವರು ಅಂಗಡಿಗೆ ಬರ್ತಾರೆ, ಅಷ್ಟಿಟ್ಟು ಪಟಾಕಿ ಕೊಳ್ತಾರೆ. ಸುರ್ ಸುರ್ ಬತ್ತಿ, ಆಟಿಕೆ ಗನ್ ಮತ್ತು ಹೂವಿನಕುಂಡಕ್ಕೆ ಹೆಚ್ಚು ಬೇಡಿಕೆ ಇದೆ" ಎನ್ನುತ್ತಾರೆ ಕೆ ಆರ್ ರಸ್ತೆಯ ಪಟವರ್ಧನ್.

ಐಟಿ ಕಂಪನಿಯಲ್ಲಿ ಮ್ಯಾನೇಜರ್ ಆಗಿರುವ ಶಿವಕುಮಾರ್ ಗೆ 3 ವರ್ಷದ ಮಗ. " ಅವನ ಗಲಾಟೆ ತಡೆಯಲಾರದೆ ನಾನು ನನ್ನ ಹೆಂಡ್ತಿ ಮಲ್ಲೇಶ್ವರದ ಮಳಿಗೆಗೆ ಹೋಗಿದ್ವಿ. ಮಗರಾಯನಿಗೆ ಒಂದು ಪ್ಲಾಸ್ಟಿಕ್ ಗನ್ ತೆಕ್ಕೊಟ್ವಿ. ಚೌಕಾಶಿ ಮಾಡಿದ ನಂತರ 200 ರೂಪಾಯಿಯ ಗನ್ 100 ರೂಗೆ ಸಿಕ್ತು. ಅದರ ಬೆಲೆ ಅಬ್ಬಬ್ಬಾ ಎಂದರೆ 40 ರೂ ಇರಲಿಕ್ಕಿಲ್ಲ" ಎಂದರು. ಅಂತೂ ಈ ವರ್ಷದ ಪಟಾಕಿ ಬಿಲ್ ಒಟ್ಟು 500ಕ್ಕೆ ಬಂತಂತೆ.

ಸಾಲು ಸಾಲು ರಜಾ ದಿನ ಬಂದಿರುವುದೂ ನಗರ ಸಪ್ಪಗಿರುವುದಕ್ಕೆ ಒಂದು ಕಾರಣ. ಅನೇಕ ಕುಟುಂಬಗಳು ಒಂದಿಲ್ಲೊಂದು ಊರಿಗೆ ಪ್ರಯಾಣ ಬೆಳೆಸಿವೆ. ಅ 22ರ ಶನಿವಾರದಿಂದ ಆರಂಭವಾಗಿರುವ ರಜಾ ಸೀಸನ್ ಸದ್ಯಕ್ಕೆ ಮುಗಿಯುವ ಲಕ್ಷಣಗಳಿಲ್ಲ. ಪುನಃ ತನ್ನ ಒರಿಜನಲ್ ಮೂಡಿಗೆ ವಾಪಸ್ಸಾಗಬೇಕಾದರೆ ನವೆಂಬರ್ 2 ಬುಧವಾರದವರೆಗೂ ಬೆಂಗಳೂರು ಕಾಯುತ್ತಿರಬೇಕು.

ಸಾಲು ಸಾಲು ರಜೆಯಲ್ಲಿ ಕೆಲವರು ರಾ.ಒನ್ ಚಿತ್ರ ನೋಡಿ ಸಂತೋಷ ಪಡುವ ಪ್ಲ್ಯಾನ್ ಹಾಕಿದ್ದಾರೆ. ದೀಪಾವಳಿ ನಿಮಿತ್ತ ಕನ್ನಡ ಚಿತ್ರಗಳು ಬಿಡುಗಡೆ ಆಗಿಲ್ಲ. ಉಳಿದಂತೆ ಇತ್ತೀಚಿನ ಆಕರ್ಷಣೆಯಾದ ಮೆಟ್ರೋ ರೈಲಿನಲ್ಲಿ ಸವಾರಿ ನಡೆದಿದೆ. ಪಟಾಕಿ, ಮಾಲಿನ್ಯ ಹೆದರಿ ಹಲವರು ತಮ್ಮ ಊರುಗಳಿಗೆ ತೆರಳಿ ಸವಿ ನಿದ್ರೆ ಸುಖ ಅನುಭವಿಸುತ್ತಿದ್ದಾರೆ. ಬೆಂಗ್ಳೂರಲ್ಲಿ ಏನ್ ಗುರು ಕಾಪಿ ಆಯ್ತಾ ಅಂತ ಕೇಳೋಣಾ ಅಂದ್ರೆ ಒಬ್ಬಾನೊಬ್ಬ ಕನ್ನಡದ ಗಿರಾಕಿ ಸಿಕ್ತಾಯಿಲ್ಲ

ರಾಜ್ಯ , ಕೇಂದ್ರ ಸರಕಾರದ ಕಚೇರಿಗಳಿಗೆ ರಜೆ, ನ್ಯಾಯಾಲಯಗಳಿಗೂ ರಜೆ ಇರುವುದರಿಂದ ಬೇಲ್, ಜೈಲ್ ಸುದ್ದಿ ಸ್ಫೋಟಗಳಿಲ್ಲ. ಬ್ಯಾಂಕಿಗೆ ರಜೆ ಇರುವುದರಿಂದ ಚೆಕ್ ಡ್ರಾಫ್ಟು, ಡಿಪಾಸಿಟ್ ಕಲೆಕ್ಷನ್ ತಲೆಬಿಸಿ ಇಲ್ಲ. ಅದೃಷ್ಟವಶಾತ್ ಕ್ರೈಂ ಸುದ್ದಿಗಳೂ ತುಂಬಾನೇ ಕಮ್ಮಿ. ಅಥವಾ ವರದಿಯಾಗಿಲ್ಲ. ನಮ್ಮ 24/7 ಟಿವಿ ಚಾನಲ್ ಸುದ್ದಿ ಸಂಪಾದಕರ ಕಷ್ಟ ಯಾರಿಗೂ ಬೇಡ, ಪಾಪ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+