2ಜಿ ಪ್ರಕರಣ: ರಾಜಾ, ಕನ್ನಿಮೋಳಿಗೆ ಜೀವಾವಧಿ ಜೈಲೇ ಗತಿ

2g-scam-raja-kanimozhi-to-get-life-term
ನವದೆಹಲಿ, ಅ.22: ಸ್ಪೆಕ್ಟ್ರಂ ಹಗರಣದಲ್ಲಿ ರೂವಾರಿ, ಡಿಎಂಕೆ ಸಂಸದ ಎ ರಾಜಾ ಮತ್ತು ಕನ್ನಿಮೊಳಿ ಸೇರಿದಂತೆ ಒಟ್ಟು 17 ಮಂದಿ ವಿರುದ್ಧ ಪಟಿಯಾಲಾ ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ. ಸೈನಿ ನ್ಯಾಯಪೀಠದೆದುರು ದೋಷಾರೋಪಪಟ್ಟಿ ದಾಖಲಾಗಿದ್ದು, ಎಲ್ಲ ಆರೋಪಿಗಳಿಗೂ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆ ಇದೆ. ಶಿಕ್ಷೆಯನ್ನು ನಿಗದಿಪಡಿಸಿರುವ ನ್ಯಾಯಾಲಯ,ವಿಚಾರಣೆಯ ನಂತರ ಆರೋಪಿಗಳಿಗೆ ಶಿಕ್ಷೆಯ ಪ್ರಮಾಣವನ್ನು ನಿಗದಿಪಡಿಸಲಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ, ಐಪಿಸಿ ಸೆಕ್ಷನ್ 409 ಮತ್ತು 120 ಬಿ ಅನುಸಾರ ಈ 17 ಮಂದಿಯ ವಿರುದ್ಧ ಆರೋಪಗಳನ್ನು ಹೊರಿಸಿದ್ದು, ನ್ಯಾ. ಸೈನಿ ಅದಕ್ಕೆ ಅಂಗೀಕಾರದ ಮುದ್ರೆ ಒತ್ತಿದ್ದಾರೆ. ಇದರಿಂದ ಆರೋಪಿಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಜೀವಾವಧಿ ಜೈಲುವಾಸ ಕಾಯಂ ಆಗಲಿದೆ.

ತಪ್ಪಿತಸ್ಥ ಕಂಪನಿಗಳಿಗೆ ಭಾರಿ ದಂಡ : ಇದೇ ವೇಳೆ ಟೆಲಿಕಾಂ ಕಂಪನಿಗಳಾದ ಅನಿಲ್ ಅಂಬಾನಿಯ ರಿಲಯನ್ಸ್ ಕಮ್ಯುನಿಕೇಶನ್ಸ್, ಯುನೈಟೆಡ್ ವೈರ್ ಲೆಸ್ ಕಂಪನಿ (ತಮಿಳುನಾಡು) ಮತ್ತು ಸ್ವಾನ್ ಟೆಲಿಕಾಂ ಕಂಪನಿಯ ವಿರುದ್ಧವೂ ಸಹ ಆರೋಪಗಳು ಸಾಬೀತಾಗಿವೆ ಎಂದು ನ್ಯಾಯಪೀಠ ಹೇಳಿದೆ. ಈ ತಪ್ಪಿತಸ್ಥ ಕಂಪನಿಗಳಿಗೆ ಭಾರಿ ದಂಡ ವಿಧಿಸುವ ಸಾಧ್ಯತೆ ಇದೆ.

ಬಹುತೇಕ ಆರೋಪಿಗಳು ಕಳೆದ 6 ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇವರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಅ. 24ರಂದು ಕೈಗೆತ್ತಿಕೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+