85 ಕೋಟಿ ಜಗನ್ ಮನೆ ಅಳೆಯುವುದು ಕಷ್ಟ

Jagan Mohan Reddy
ಹೈದರಾಬಾದ್, ಅ.21: ಕಡಪ ಸಂಸದ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಹೊಂದಿರುವ ಸ್ಥಿರಾಸ್ತಿಗಳ ಬಗ್ಗೆ ಹದ್ದಿನ ಕಣ್ಣಿಟ್ಟಿರುವ ಸಿಬಿಐ ತಂಡ ಮತೊಮ್ಮೆ ದಾಳಿ ನಡೆಸಿದೆ.

ಜಗನ್ ಅವರ ನೆಚ್ಚಿನ ಲೋಟಸ್ ಪಾಂಡ್ ಬಂಗಲೆ ಮೇಲೆ ಗುರುವಾರ ದಾಳಿ ನಡೆಸಿದ ಸಿಬಿಐ ತಂಡ ಕಟ್ಟಡದ ಮೌಲ್ಯದ ಲೆಕ್ಕಾಚಾರ ಹಾಕತೊಡಗಿದೆ. ವಸತಿ ನಿವೇಶನ ಖರೀದಿ ಹಾಗೂ ಕಟ್ಟಡ ನಿರ್ಮಾಣ ವೆಚ್ಚ ಎಲ್ಲಾ ಸೇರಿ ಸುಮಾರು 85 ಕೋಟಿ ರು ತೂಗಬಹುದು ಎಂದು ಅಂದಾಜಿಸಲಾಗಿದೆ.

ಜಗನ್ ಮೋಹನ್ ರೆಡ್ಡಿ ಬಂಗಲೆ ವಿವರ ಪಡೆದ ನಂತರ ಬಳ್ಳಾರಿ ಜನಾರ್ದನ ರೆಡ್ಡಿ ಹಾಗೂ ಸೋದರರ ಮನೆ ಮೇಲೆ ಕೂಡಾ ಇದೇ ರೀತಿ ಅಕ್ರಮ ಕಟ್ಟಡ, ಭೂ ಕಬಳಿಕೆ ಕೇಸ್ ಹಾಕಲು ಸಿಬಿಐ ನಿರ್ಧರಿಸಿದೆ.

ಸ್ಥಳೀಯ ಮುನ್ಸಿಪಾಲಿಟಿ ಅಧಿಕಾರಿಗಳೊಂದಿಗೆ ಬಂದಿದ್ದ ಸಿಬಿಐ ತಂಡ, ಕಟ್ಟಡದ ದಾಖಲೆ ಪರೀಶಿಲಿಸಿದ್ದಾರೆ. 5,807 ಚದರ ಅಡಿ ವಿಸ್ತೀರ್ಣದ ನಿವೇಶನದ ಜೊತೆಗೆ ಬಿಲ್ಡ್ ಅಪ್ ಏರಿಯಾ 88,000 ಚ.ಅ ಎಂದು ತೋರಿಸಲಾಗಿದೆ.

National Remote Sensing Agency (NRSA)ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ನಗರ ಯೋಜನ ಸಮಿತಿ ಅವರು ಎಲ್ಲರೂ ಸೇರಿ ಕಟ್ಟಡ ವ್ಯಾಲ್ಯೂಯೇಷನ್ ಕೆಲಸದಲ್ಲಿ ತೊಡಗಿದ್ದಾರೆ. ಈ ಬೃಹತ್ ಕಟ್ಟಡದ ವಿಸ್ತೀರ್ಣ ಅಳಿಯುವ ಕಾರ್ಯ ಶುಕ್ರವಾರ ಕೂಡಾ ಮುಂದುವರೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+