ನಮ್ಮ ಮೆಟ್ರೋದಲ್ಲಿ ಗೌರಿ ಹುಟ್ಟುಹಬ್ಬ ಭಾರೀ ಜೋರು

ಆ ಮುದ್ದುಹುಡುಗಿ ಗೌರಿಯ ಚಿಗುರಿದ ಕನಸಿಗೆ ನೀರು, ಗೊಬ್ಬರ ಹಾಕಿ ನೀರೆರೆದವರು ಕುಟುಂಬದ ಸದಸ್ಯರೆಲ್ಲ. ಹತ್ತು ವರ್ಷದ ಬೆಂಗಳೂರಿನ ಬಾಲಕಿಯ ಹುಟ್ಟುಹಬ್ಬವನ್ನು ನಮ್ಮ ಮೆಟ್ರೋ ರೈಲಿನಲ್ಲಿಯೇ ಹಲವಾರು ಜನರ ಚಪ್ಪಾಳೆಗಳ ನಡುವೆ ಭರ್ಜರಿಯಾಗಿ ಆಚರಿಸಿದರು. ಆ ಬಾಲಕಿಯ ಕಂಗಳಲ್ಲಿ ಏನೋ ಸಾಧಿಸಿದ ಸಂತಸ ಮನೆಮಾಡಿತ್ತು.
ಬೈಯಪ್ಪನಹಳ್ಳಿಯಲ್ಲಿ ನೆಲೆಸಿರುವ ಎನ್ಕಾರ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಗೋಪಕುಮಾರ್ ಎಂಬುವವರ ಮಗಳಾದ ಗೌರಿ ಮೆಟ್ರೋದಲ್ಲಿ ಪಯಣಿಸಿದ್ದು ಇದು ಮೊದಲೇನಲ್ಲ. ಸಿಂಗಪುರದಲ್ಲಿ ಮತ್ತಿತರ ದೇಶಗಳಲ್ಲಿ ಈಗಾಗಲೆ ಓಡಾಡಿದ್ದಾಳೆ. ಆದರೆ ನಮ್ಮ ಊರಿನ ನಮ್ಮ ಮೆಟ್ರೋದ ಪಯಣ ಆಕೆಯಲ್ಲಿ ವಿಶೇಷವಾದ ಖುಷಿಯನ್ನು ತುಂಬಿತ್ತು. ಎಂಜಿ ರಸ್ತೆಯಲ್ಲಿ ಬಂದಿಳಿದ ಕೂಡಲೆ ಮನೆಮಂದಿಯೆಲ್ಲ ಕೇಕ್ ಕತ್ತರಿಸಿ ಗೌರಿಯ ಕನಸನ್ನು ನನಸು ಮಾಡಿದರು.
ದುಬೈಗಿಂತ ಬೆಸ್ಟ್ : 91.1 ಎಫ್ಎಮ್ ರೇಡಿಯೋದಲ್ಲಿ ಜಾಕಿಯಾಗಿರುವ 'ನಮ್ಮೂರ ಮಂದಾರ ಹೂವು' ಚಿತ್ರದಲ್ಲಿ ನಟಿಸಿದ್ದ ಕನ್ನಡ ನಟ ವಿನಾಯಕ್ ಜೋಶಿ ದಟ್ಸ್ ಕನ್ನಡದೊಡನೆ ಮಾತನಾಡಿ, ದುಬೈ ಮೆಟ್ರೋಗಿಂತ ಬೆಂಗಳೂರು ಮೆಟ್ರೋ ತಾಂತ್ರಿಕವಾಗಿ ಮುಂದುವರಿದೆ ಮತ್ತು ನೋಡಲು ಸುಂದರವಾಗಿದೆ. ಈ ಅನುಭವವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಸಂತಸ ಹಂಚಿಕೊಂಡರು.












Click it and Unblock the Notifications