ನಮ್ಮ ಮೆಟ್ರೋದ ಭರ್ಜರಿ ಹುಟ್ಟುಹಬ್ಬ ಆಚರಣೆ

Namma Metro Bangalore : Unforgettable experience
ಬೆಂಗಳೂರು, ಅ. 20 : 'ನಮ್ಮ ಮೆಟ್ರೋ' ಹುಟ್ಟುಹಬ್ಬವನ್ನು ಬೆಂಗಳೂರಿನ ಉತ್ಸಾಹಿ ನಾಗರಿಕರು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ದಿನಗೂಲಿ ಕೆಲಸದವರಿಂದ ಹಿಡಿದು ತಿಂಗಳಿಗೆ ಲಕ್ಷಲಕ್ಷ ಸಂಬಳವನ್ನು ಜೇಬಿಗಿಳಿಸುವವರಿಂದ ನಮ್ಮ ಮೆಟ್ರೋ ಮುದ್ದಾಡಿಸಿಕೊಂಡಿದೆ. ನಮ್ಮ ಮೆಟ್ರೋ ಎಂಬ ಹೆಸರಿಟ್ಟುಕೊಂಡಿರುವ ಮುದ್ದಾದ ಮಗುವನ್ನು ಈಗ ಜತನದಿಂದ ಕಾಪಾಡುವ ಜವಾಬ್ದಾರಿಯೂ ನಾಗರಿಕರ ಮೇಲೆಯೇ ಇದೆ.

ಆಗ ಬರುತ್ತೆ ಈಗ ಬರುತ್ತೆ ಎಂದು ಕಾದಿದ್ದ ನಮ್ಮ ಮೆಟ್ರೋ ಜನ್ಮಪಡೆದಿದೆ. ಸರಿಯಾಗಿ ಅಕ್ಟೋಬರ್ 20ರ ಎಳೆಸಂಜೆ 4 ಗಂಟೆಗೆ ಸಾರ್ವಜನಿಕರನ್ನು ಮಹಾತ್ಮಾ ಗಾಂಧಿ ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ಓಡಾಡಿಸಿದ ರೈಲಿನ ಪ್ರಯಾಣದ ಅನುಭವವನ್ನು ಕೆಲಪದಗಳಲ್ಲಿ ಹಿಡಿದಿಡುವುದು ಅಸಾಧ್ಯ. ರೈಲಿನಲ್ಲಿ ಹೋಗುತ್ತಿದ್ದೇವೆಯೋ ವಿಮಾನದಲ್ಲಿ ಕುಳಿತು ಆಗಸದಲ್ಲಿ ಹಾರಾಡುತ್ತಿದ್ದೇವೆಯೋ ಎಂಬ ಸಂದೇಹ. ಒಟ್ಟಿನಲ್ಲಿ ಪ್ರಯಾಣಿಕರ ಕಾಲುಗಳಂತೂ ನೆಲದ ಮೇಲಿರಲಿಲ್ಲ.

ರೈಲು ಹತ್ತಿದ ಕೂಡಲೆ ಕೇಕೆ ಹಾಕಿ ಸಂತಸ ವ್ಯಕ್ತಪಡಿಸುತ್ತಿದ್ದ ಹದಿಹರೆಯದ ಕಾಲೇಜು ಹುಡುಗಿಯರು, ಶಾಲೆಗೆ ಚಕ್ಕರ್ ಹಾಕಿ ಮೆಟ್ರೋ ಪ್ರಯಾಣದ ಅನುಭವ ಅನುಭವಿಸಲು ಬಂದ ಶಾಲಾ ಮಕ್ಕಳು, ಹೆಗಲ ಮೇಲೆ ಟವೆಲ್ ಹಾಕಿಕೊಂಡು ಬಸ್ ಪ್ರಯಾಣಕ್ಕೂ ಇದಕ್ಕೂ ವ್ಯತ್ಯಾಸವಿಲ್ಲ ಎಂಬಂತೆ ಕುಳಿತಿದ್ದ ಯಜಮಾನರು, ಕಬ್ಬನ್ ಪಾರ್ಕಲ್ಲಿ ಏಕೆ ನಮ್ಮ ಮೆಟ್ರೋದಲ್ಲೇ ಪ್ರಣಯ ನಿವೇದನೆಯಾಗಲಿ ಎಂದು ಬೆರಳಿಗೆ ಬೆರಳು ತಾಗಿಸುತ್ತಿದ್ದ ಯುವಪ್ರೇಮಿಗಳು, ಅಯ್ಯೋ ಹದಿನಾಕೇ ನಿಮಿಷದ ಪ್ರಯಾಣವಾ? ಅಂತ ನಿರಾಸೆ ತೋರಿದ ಚಿಗುರುಮೀಸೆಯ ಯುವಕ... ಎಲ್ಲ ಅಲ್ಲಿದ್ದರು.

ಟಿಕೆಟ್ ಪಡೆಯುವ ಮೊದಲು ಒಂದೂವರೆ ಗಂಟೆ ಬಿಸಿಲಲ್ಲಿ ಕಾದಿದ್ದಕ್ಕೆ ಯಾರೂ ತಕರಾರು ಎತ್ತಿರಲಿಲ್ಲ. ಮೆಟ್ರೋ ಹತ್ತಿದಾಗ ಆದ ದಣಿವನ್ನೆಲ್ಲ ಎಸಿ ಮೆಟ್ರೋ ಪರಿಹರಿಸಿತ್ತು. ಎಂಜಿ ರಸ್ತೆಯಿಂದ ಹೊರಟ ರೈಲು, ಟ್ರಿನಿಟಿ, ಹಲಸೂರು, ಇಂದಿರಾನಗರ, ವಿವೇಕಾನಂದ ರಸ್ತೆ ಮುಖಾಂತರ ಸಾಗಿ ಬೈಯಪ್ಪನಹಳ್ಳಿ ನಿಲ್ದಾಣ ತಲುಪಲು ತೆಗೆದುಕೊಂಡಿದ್ದು ಕೇವಲ 14 ನಿಮಿಷ. ನಿಲ್ದಾಣಗಳಲ್ಲಿ ಹತ್ತಿಳಿಯಲು ಇದ್ದದ್ದು 30 ಸೆಕೆಂಡು ಮಾತ್ರ. ಆ ಹದಿನಾಲ್ಕು ನಿಮಿಷದ ಪ್ರಯಾಣದ ಅನುಭವವನ್ನು ಇಂದು ಮೊದಲ ಬಾರಿಗೆ ಪ್ರಯಾಣ ಮಾಡಿದ ಜನತೆ ಜನ್ಮಪೂರ್ತಿ ಮರೆಯಲಿಕ್ಕಿಲ್ಲ.

ಅಯ್ಯೋ ಈ ರಶ್ಶಲ್ಲಿ ಯಾರು ಹೋಗ್ತಾರೆ, ಮತ್ತೆ ಬಂದ್ರಾಯ್ತು ಎಂದು ಉದ್ಘಾಟನೆಯಾದಂತೆ ವಾಪಸ್ ಮನೆ ಸೇರಿಕೊಂಡ ಕುಟುಂಬಗಳೆಷ್ಟೋ? ಆದರೆ, ಮೊದಲ ನೋಟ, ಮೊದಲ ಪ್ರಣಯ, ಮೊದಲ ಚುಂಬನ, ಮೊದಲ ಆಲಿಂಗನ, ಮೊದಲ ರಾತ್ರಿಯ ಅನುಭವದ ಹಾಗಿರಲು ಸಾಧ್ಯವೆ? ದೆ ಮಿಸ್ಡ್ ದಿ ಫನ್. ಮೆಟ್ರೋದಲ್ಲಿ ಸೀಟು ಸಿಗದಿದ್ದರೂ ಪರವಾಗಿಲ್ಲ ಮಸ್ತ್ ಮಜಾ ಮಾಡೋಣ ಅಂತ ಬಂದಿದ್ದ ಸಾವಿರಾರು ಜನರ ನಡುವೆ ಒಂದು ವಿಶಿಷ್ಟ ಸಂಗತಿಯೂ ಘಟಿಸಿತು. ಅದೇನೆಂದರೆ... ಮುಂದಿನ ಪುಟ ಓದಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+