ಮೈಗ್ರೇನ್ ವಾಸಿ ಮಾಡುವ ನೆಪದಲ್ಲಿ ಮೌಲ್ವಿಯಿಂದ ಸತತ ಅತ್ಯಾಚಾರ

migraine-girl-repeatedly-raped-by-pak-pir
ಇಸ್ಲಾಮಾಬಾದ್, ಅ.20: ಮಗಳು ಮೈಗ್ರೇನ್ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಜರಾ ವಾಸಿ ಮಾಡು ಎಂದು ಅಪ್ಪ ತನ್ನ ಹದಿಹರಯದ ಮಗಳನ್ನು ಮೌಲ್ವಿಯ ಬಳಿ ಬಿಟ್ಟುಬಂದರೆ ಆ ಪಾಪಿ ಮೌಲ್ವಿ ಮೈಗ್ರೇನ್ ವಾಸಿ ಮಾಡುವ ನೆಪದಲ್ಲಿ ಅವಳ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ.

ಈ ಬಗ್ಗೆ 14 ವರ್ಷದ ಬಾಲಕಿಯ ಅಪ್ಪ ಖುರಾರಿಯನವಾಲಾ ನಿವಾಸಿ ಅಲ್ಲಾ ವಸಯಾ ಪೊಲೀಸರಿಗೆ ದೂರು ನೀಡಿದ್ದು, ಸ್ಥಳೀಯ ಮೌಲ್ವಿ ಮೆಹಮೂದ್ ಖಾಸಿಂ ಈ ಕುಕೃತ್ಯ ಎಸಗಿದ್ದಾನೆ. ಮಗಳು ಗರ್ಭವತಿಯಾದಾಗ ನನಗೆ ವಿಷಯ ತಿಳಿದುಬಂದಿತು ಎಂದು ತಿಳಿಸಿದ್ದಾರೆ.

ನನ್ನ ಮಗಳು ಆಗಾಗ ವಿಪರೀತ ತಲೆನೋವು ಅನ್ನುತ್ತಿದ್ದಳು. ಅನೇಕ ವೈದ್ಯರಿಗೆ ತೋರಿಸಿದೆ. ಆದರೆ ಕಾಯಿಲೆ ವಾಸಿ ಆಗಲೇ ಇಲ್ಲ. ಆಗಲೇ ಯಾರೋ ಇವಯ್ಯನ ಬಗ್ಗೆ ಹೇಳಿದರು. ಮಾಂತ್ರಿಕ ಶಕ್ತಿ ಹೊಂದಿದ್ದು, ಮೈಗ್ರೇನ್ ಅಂತಹ ವಿಪರೀತದ ಕಾಯಿಲೆಯನ್ನೂ ವಾಸಿ ಮಾಡುತ್ತಾನೆ ಎಂದು ತಿಳಿದುಬಂದಿತು.

ನನಗೋ ಮಗಳ ಮೇಲಿನ ಪ್ರೀತಿ. ಸರಿ ಅವಳನ್ನು ಇವಯ್ಯನ ಬಳಿಗೆ ಕರೆದುಕೊಂಡು ಹೋದೆ. ಆದರೆ ... ಎಂದು ಬಾಲಕಿಯ ಆಪ್ಪ ಅಲವತ್ತುಕೊಂಡಿದ್ದಾರೆ.

ಸರಿ ಮೌಲ್ವಿ ಮೆಹಮೂದ್ ನನ್ನ ಮಗಳನ್ನು ಪರೀಕ್ಷಿಸಿದ. ಆದರೆ ಅವಳ ತಲೆನೋವು ವಾಸಿ ಮಾಡುವುದು ಅಷ್ಟು ಸುಲಭ ಸಾಧ್ಯವಲ್ಲ. ಅನೇಕ ಬಾರಿ ಬರಬೇಕಾಗುತ್ತದಂತೆ ಎಂದು ವಿವರಿಸಿದ. ಸರಿ ಆಯ್ತು ಬರ್ತೀವಿ ಎಂದು ಮಗಳನ್ನು ಅನೇಕ ಬಾರಿ ಕರೆದೊಯ್ದೆ.

ಚಿಕಿತ್ಸೆ ಕೊಡುವಾಗ ಬೇರೆ ಯಾರೂ ಇರಬಾರದು ಎಂದು ಮೌಲ್ವಿ ಮೆಹಮೂದ್ ಏಕಾಂತದಲ್ಲಿ ನನ್ನ ಮಗಳನ್ನು ಸಂಧಿಸುತ್ತಿದ್ದ. ಆಗಲೇ ಏನೋ ಆಗಿದೆ ಎಂದು ಬಾಲಕಿಯ ಅಪ್ಪ ಗೋಳಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+