ಶಾಸಕ ಸಂಗಮೇಶ್ ಈಗ್ಲೋ ಆಗ್ಲೋ ಜೈಲುಪಾಲು ಖಚಿತ

ಭದ್ರಾವತಿಯ ವಿವಾದಿತ ಶಾಸಕ ಕಾಂಗ್ರೆಸ್ಸಿನ ಬಿ.ಕೆ. ಸಂಗಮೇಶ್ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ತುತ್ತಾಗಿದ್ದು, ಅವರ ವಿರುದ್ಧ ಸ್ವತಃ ಪೊಲೀಸರೇ ಎಫ್‌ಐಆರ್ ದಾಖಲಾಗಿದೆ. ಆದ್ದರಿಂದ ಅವರ ಬಂಧನ ಸಾಧ್ಯತೆ ಹೆಚ್ಚಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಪರುಶುರಾಮಪ್ಪ, ಶಾಸಕ ಸಂಗಮೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.
ಶಾಸಕರು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜತೆಗೆ ತಮ್ಮನ್ನು ಹಿಡಿದು ಎಳೆದಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಸೆಕ್ಷನ್ 143, 504, 353 ಹಾಗೂ 186ರ ಅಡಿ ಶಾಸಕ ಸಂಗಮೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದೇ ಮೊದಲಲ್ಲ: ಶಾಸಕ ಸಂಗಮೇಶ್‌ರ ಈ ರೀತಿಯ ದುರ್ವರ್ತನೆ ಇದೇ ಮೊದಲಲ್ಲ. ಈ ಹಿಂದೆ ಭದ್ರಾವತಿ ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಆರೋಪವೂ ಅವರ ಮೇಲಿತ್ತು. ಈ ಸಂಬಂಧ ಅವರ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಅವರನ್ನು ಪೊಲೀಸರು ಬಂಧಿಸಿದ್ದ ಘಟನೆಯೂ ನಡೆದಿತ್ತು.












Click it and Unblock the Notifications