ಎಂಆರ್ ಪಿಎಲ್ ಘಟಕದಲ್ಲಿ ಸ್ಫೋಟ-ಓರ್ವನ ಸಾವು
ಮಂಗಳೂರು,
ಅ.18 : ಮಂಗಳೂರು ತೈಲ ಶುದ್ಧೀಕರಣ ಕಾರ್ಯಾಗಾರ (ಎಂ ಆರ್ ಪಿ ಎಲ್)ದ ಮೂರನೇ ಹಂತದ ವಿಸ್ತರಣೆ ಕಾಮಗಾರಿ ಸೈಟ್ ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಇತರ ನಾಲ್ಕು ಮಂದಿಗೆ ಗಾಯಗಳಾಗಿವೆ. id="toptextpromo">ಮಂಗಳವಾರ
ಮಧ್ಯಾಹ್ನದ ಹೊತ್ತಿಗೆ ಈ ದುರಂತ ಸಂಭವಿಸಿತು. ಮೃತ ಕಾರ್ಮಿಕನನ್ನು ಒರಿಸ್ಸಾ ಮೂಲದ ಮುಲ್ಲಾ ಎಂದು ಗುರುತಿಸಲಾಗಿದ್ದು ವೃತ್ತಿಯಲ್ಲಿ ವೆಲ್ಡರ್. ಗಾಯಾಳುಗಳನ್ನು ಸುರತ್ಕಲ್, ಮಂಗಳೂರು ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. id='are-slot-1' class='oiad oi-axt oiadv'> id='top-searched-articles'>ವೆಲ್ಡಿಂಗ್
ನಡೆಯುತ್ತಿದ್ದ ವೇಳೆ ಹಾರಿದ ಕಿಡಿಯಿಂದ ಕಚ್ಚಾ ತೈಲ ಸಂಗ್ರಹದ ತೊಟ್ಟಿಗೆ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿರುವುದಾಗಿ ಹೇಳಲಾಗಿದೆ. ತಕ್ಷಣವೇ ಕಾರ್ಯಪೃತ್ತವಾದ ವಿಪತ್ತು ನಿರ್ವಹಣೆ ವಿಭಾಗ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಿತು. ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.











Click it and Unblock the Notifications