4 ಖಂಡಗಳಿಗೆ ಹಬ್ಬಿದ ಕಾರ್ಪೊರೇಟ್ಸ್ vs ನಿರುದ್ಯೋಗಿಗಳ ಕದನ

Wall Street Row
ನ್ಯೂಯಾರ್ಕ್, ಅ.17: ನಿರುದ್ಯೋಗ, ಬಡತನ ಹಾಗೂ ಕಾರ್ಪೊರೇಟ್ ವಲಯದಲ್ಲಿನ ಭ್ರಷ್ಟಾಚಾರ ವಿರುದ್ಧದ 'ವಾಲ್ ಸ್ಟ್ರೀಟ್ ಪ್ರತಿಭಟನೆ' ಅಮೆರಿಕದ ಗಡಿ ದಾಟಿ ನಾಲ್ಕು ಖಂಡಗಳನ್ನು ತಲುಪಿದೆ.

ನ್ಯೂಯಾರ್ಕ್‌ನಲ್ಲಿರುವ ಟೈಮ್ಸ್ ಸ್ಕ್ವೇರ್‌ನಲ್ಲಿ ಪ್ರತಿಭಟನೆ ಆರಂಭವಾಗಿ ತಿಂಗಳು ಕಳೆದರೂ, ಪರಿಹಾರ ಸಿಕ್ಕಿಲ್ಲ. ಕಾರ್ಪೊರೇಟ್ಸ್ ವಿರುದ್ಧ ದನಿ ಎತ್ತುತ್ತಿರುವ ಪ್ರತಿಭಟನಾಕಾರರನ್ನು ಚದುರಿಸಲು ಆಶ್ರುವಾಯು ಬಳಸಿದರೂ ಪ್ರಯೋಜನವಾಗಿಲ್ಲ. ಕೊನೆಗೆ ಪ್ರತಿಭಟಾ ನಿರತರನ್ನು ಎಳೆದೊಯ್ದು ಚಚ್ಚುತ್ತಿದ್ದಾರೆ ಎಂದ್೭ಉ ಮಾಧ್ಯಮಗಳು ವರದಿ ಮಾಡಿದೆ.

ನ್ಯೂಯಾರ್ಕ್‌ನ ವಾಲ್‌ಸ್ಟ್ರೀಟ್ ಪ್ರತಿಭಟನೆಯಿಂದ ಸ್ಫೂರ್ತಿ ಪಡೆದಿರುವ ವಿಶ್ವದ ಇತರ ಸುಮಾರು 82 ರಾಷ್ಟ್ರಗಳ 951 ನಗರಗಳಲ್ಲಿ ತಮ್ಮತಮ್ಮ ರಾಷ್ಟ್ರಗಳಲ್ಲಿನ ಕಾರ್ಪೊರೇಟ್ ವಲಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಅವುಗಳ ಅತಿಲೋಭತನವನ್ನು ವಿರೋಧಿಸಿ ಪ್ರದರ್ಶನಕ್ಕೆ ಇಳಿದಿದ್ದಾರೆ.

ಸ್ಪೇನ್ , ಸಿಡ್ನಿ, ಹಾಂಗ್‌ಕಾಂಗ್ ಹಾಗೂ ಟೋಕಿಯೊ ಮೊದಲಾದ ವಿಶ್ವದ ಪ್ರಮುಖ ನಗರಗಳಲ್ಲೂ ಕಾರ್ಪೊರೇಟ್ಸ್ ಲಾಬಿ, ಸರ್ಕಾರದ ದುರಾಸೆಯ ವಿರುದ್ಧ ಜನರು ಸಿಡಿದೆದ್ದಿದ್ದಾರೆ.

ಹಾಂಗ್‌ಕಾಂಗ್‌ನಲ್ಲಿ 500ಕ್ಕೂ ಅಧಿಕ ಪ್ರತಿಭಟನಕಾರರು, ಆಸ್ಟ್ರೇಲಿಯದ ಸಿಡ್ನಿಯಲ್ಲಿ ಸುಮಾರು 600ಕ್ಕೂ ಅಧಿಕ ಪ್ರತಿಭಟನಕಾರರು ರಸ್ತೆಗಿಳಿದು ಹೋರಾಟ ನಡೆಸಿದ್ದಾರೆ.

ಜಪಾನ್‌ನ ರಾಜಧಾನಿ ಟೋಕಿಯೊ, ಯುರೋಪ್ ಭೂಖಂಡದ ಆರ್ಥಿಕ ರಾಜಧಾನಿ ಫ್ರಾಂಕ್‌ಫರ್ಟ್‌ನಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಜನರು ಪ್ರಸಕ್ತ ಕಾರ್ಪೊರೇಟ್ ನೀತಿಯ ವಿರುದ್ಧ ಪ್ರತಿಭಟನೆ ನಡೆಸಿದರೆ, ಲಂಡನ್‌ನಲ್ಲಿ 500ಕ್ಕೂ ಅಧಿಕ ಪ್ರತಿಭಟನಕಾರರು ಸೈಂಟ್ ಪೌಲ್ ಚರ್ಚ್‌ನಿಂದ ಸಮೀಪದ ಸ್ಟಾಕ್ ಎಕ್ಸ್‌ಚೇಂಜ್ ಕಟ್ಟಡದವರೆಗೂ ಮೆರವಣಿಗೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+