ಯಡಿಯೂರಪ್ಪ ಹೃದಯ ಚಿಕಿತ್ಸೆಗೆ ಡೇಟ್ ಫಿಕ್ಸ್?

ಸರ್ಕಾರಿ ಸ್ವಾಮ್ಯದ ಜಯದೇವ ಹೃದ್ರೋಗ ಆಸ್ಪತ್ರೆಯ ತುರ್ತು ನಿಗಾ ಘಟಕ(ICU)ದಲ್ಲಿರುವ ಯಡಿಯೂರಪ್ಪ ಅವರ ಆರೋಗ್ಯದ ತಪಾಸಣೆಗೆ ಐವರು ತಜ್ಞ ವೈದ್ಯರನ್ನು ನೇಮಿಸಲಾಗಿದೆ. 24 ಗಂಟೆಯಿಂದ 48 ಗಂಟೆಗಳ ಕಾಲ ಅಬ್ಸರ್ ವೇಷನ್ ಮಾಡಿದ ನಂತರ ಪೊಲೀಸರಿಗೆ ಅವರ ದೇಹಸ್ಥಿತಿಯ ಬಗ್ಗೆ ವರದಿ ನೀಡಲಾಗುವುದು.
ಯಡಿಯೂರಪ್ಪ ಅವರ ಬಿಪಿ, ಶುಗರ್ ಪರೀಕ್ಷೆ ನಡೆಸಲಾಗಿದೆ. ಎಕೋ, ಇಸಿಜಿ, ರಕ್ತಪರೀಕ್ಷೆ ಕೂಡಾ ಮಾಡಲಾಗಿದ್ದು, ಇನ್ನೂ ವರದಿ ಬಂದಿಲ್ಲ. ಡಾ. ಪ್ರಸಾದ್, ಡಾ. ರವೀಂದ್ರನಾಥ್, ಡಾ. ನರಸಿಂಹಶೆಟ್ಟಿ, ಡಾ. ಜಗದೀಶ್ ಅವರ ತಂಡ ಯಡಿಯೂರಪ್ಪ ಅವರಿಗೆ ಚಿಕಿತ್ಸೆ ನೀಡುತ್ತಿದೆ.
ಕನಿಷ್ಠ ಮೂರು ದಿನವಾದರೂ ಆಸ್ಪತ್ರೆಯಲ್ಲಿರಬೇಕಾಗುತ್ತದೆ ಎಂದು ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ಅವರು ಹೇಳಿದ್ದಾರೆ.












Click it and Unblock the Notifications