ಜಯನಗರದಲ್ಲಿ ವೇಶ್ಯಾವಾಟಿಕೆ: ಏಳು ಯುವತಿಯರ ಬಂಧನ

ಬಂಧಿತ ಆರೋಪಿಗಳನ್ನು ಬನಶಂಕರಿಯ ಸುಬ್ರಹ್ಮಣ್ಯ (31), ಕೋಣನಕುಂಟೆ ಕ್ರಾಸ್‌ನ ಸದಾಶಿವ (28) ಹಾಗೂ ಸಾರಾಯಿಪಾಳ್ಯದ ಬಾಬು ಪೀರ್ (32) ಎಂದು ಗುರುತಿಸಲಾಗಿದೆ. ಆರೋಪಿಗಳು ಜಯನಗರ ಟಿ ಬ್ಲಾಕ್‌ನ 11ನೆ ಮುಖ್ಯರಸ್ತೆ, 38ನೆ ಕ್ರಾಸ್‌ನಲ್ಲಿರುವ ಅಪಾರ್ಟ್ ಮೆಂಟಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಹೇಳಲಾಗಿದೆ.
ಆರೋಪಿಗಳಿಂದ 8 ಸಾವಿರ ರೂಪಾಯಿ ನಗದು, ವೇಶ್ಯಾ ದಂಧೆಗೆ ಗಿರಾಕಿಗಳನ್ನು ಸಂಪರ್ಕಿಸಲು ಬಳಕೆ ಮಾಡುತ್ತಿದ್ದ ಏಳು ಮೊಬೈಲ್ ಫೋನ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ಯಾಮಸುಂದರ್, ರವಿ ಹಾಗೂ ರಾಜ ಎಂಬವರು ತಲೆ ಮರೆಸಿಕೊಂಡಿದ್ದು ಅವರ ಬಂಧನಕ್ಕೆ ಶೋಧ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.












Click it and Unblock the Notifications