ಪಡುವಾರಹಳ್ಳಿಯಲ್ಲಿ ಪತ್ನಿಯಿಂದ ಪತಿಯ ಹತ್ಯೆ?

Wife murders hunband Vittal
ಮೈಸೂರು, ಅ 13 : ಟೈಲರ್ ವೃತ್ತಿ ಮಾಡುತ್ತಿದ್ದ ವ್ಯಕ್ತಿಯೊಬ್ಬ ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಪಡುವಾರಹಳ್ಳಿಯಲ್ಲಿ ನಡೆದಿದೆ. ಆದರೆ ಆತನನ್ನು ಪತ್ನಿಯೇ ನೆರೆಮನೆಯಾತನೊಂದಿಗೆ ಸೇರಿ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅವರಿಬ್ಬರನ್ನು ಬಂಧಿಸಲಾಗಿದೆ.

ವಿಠಲ್ ಹಾಗೂ ಆತನ ಪತ್ನಿ ಮಂಗಳಗೌರಿ ಪಡುವಾರಹಳ್ಳಿಯಲ್ಲಿ ಕೆಲವು ಸಮಯಗಳಿಂದ ವಾಸಿಸುತ್ತಿದ್ದರು. ವಿಠಲ್ ಟೈಲರ್ ಕೆಲಸ ಮಾಡಿ ಸಂಸಾರ ನಿರ್ವಹಣೆ ಮಾಡುತ್ತಿದ್ದ. ಈ ನಡುವೆ ಇವರ ಮನೆ ಪಕ್ಕವೇ ತಮಿಳುನಾಡು ಮೂಲದ ವೆಂಕಟೇಶ್ ಎಂಬಾತ ಬಾಡಿಗೆ ಮನೆ ಮಾಡಿಕೊಂಡಿದ್ದ. ಮನೆ ಪಕ್ಕದವನಾದುದರಿಂದ ಮಂಗಳಗೌರಿ ಹಾಗೂ ವೆಂಕಟೇಶ್ ನಡುವೆ ಪರಿಚಯವಾಗಿತ್ತು. ಆದರೆ ಪರಿಚಯ ಪ್ರೇಮಕ್ಕೆ ತೆರಳಿದ್ದು ಆತನಿಗೆ ಮಂಗಳಗೌರಿಯೇ ಮನೆಯಿಂದ ಊಟ ತಿಂಡಿ ಮಾಡಿಕೊಡುತ್ತಿದ್ದಳು ಎನ್ನಲಾಗಿದೆ.

ವೆಂಕಟೇಶ್ ಪರಿಚಯವಾದ ಬಳಿಕ ಮಂಗಳಗೌರಿ ಹಾಗೂ ವಿಠಲ್ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆದರೆ ಬುಧವಾರ ವಿಠಲ್ ಮೃತದೇಹ ರಕ್ತದ ಮಡುವಿನಲ್ಲಿ ಗೋಚರಿಸಿದ್ದು ಈತನ ಹತ್ಯೆ ಹೇಗಾಯಿತು ಎಂಬುವುದು ನಿಗೂಢವಾಗಿ ಉಳಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಪತ್ನಿ ಮಂಗಳಗೌರಿ ಹಾಗೂ ವೆಂಕಟೇಶ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಪೊಲೀಸರ ತನಿಖೆ ಬಳಿಕವಷ್ಟೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. [ಮದುವೆ ಯಾಕೆ ಸಾಯುತ್ತಿವೆ : ರವಿ ಬೆಳಗೆರೆ ಲೇಖನ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+