ಬಾರ್ ಗರ್ಲ್ ಸೋದರಿಯ ಅತ್ಯಾಚಾರ: ಬಾರ್ ಓನರ್ ಬಂಧನ

ಇಲ್ಲಿನ ಸಿಂಧಿ ಕಾಲೊನಿಯಲ್ಲಿರುವ ರಾಣಿ ಬಾರ್ ಅಂಡ್ ರೆಸ್ಟೋರೆಂಟಿನ ಮಾಲೀಕ ಮೋನು ಸಚದೇವ್ ತನ್ನ ಬಾರ್ ನಲ್ಲಿ ಕೆಲಸಕ್ಕಿದ್ದ ಬಾರ್ ಗರ್ಲ್ ಮೇಲೆ ಮೊದಲು ಮೋಹಗೊಂಡ. ಆದರೆ ಅವಳು ನಿರಾಕರಿಸಿದಾಗ, ಅಪ್ರಾಪ್ತ ವಯಸ್ಸಿನ ಅವಳ ಸೋದರಿಯನ್ನು ಅಪಹರಿಸಿ, ಅತ್ಯಾಚಾರ ನಡೆಸಿದ್ದಾನೆ.
ಬಾರ್ ಗರ್ಲ್, ತನ್ನ ಇಬ್ಬರು ಸೋದರಿಯರ ಜತೆ ಇಲ್ಲಿನ ಜೈಪುರದ ನಾಗಪಾಡದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. 25 ವರ್ಷದ ಸಚದೇವ್ ತನ್ನ ಬಾರ್ ಗರ್ಲ್ ಪ್ರೇಮಪಾಶದಲ್ಲಿ ಸಿಲುಕಿ ಆಗಾಗ ಈ ಮನೆಗೆ ಭೇಟಿಗೆ ಬರುತ್ತಿದ್ದ. ಆದರೆ ಆಕೆ ಒಲ್ಲೆ ಎಂದಿದ್ದಳು. ಇದರಿಂದ ಅತೃಪ್ತಗೊಂಡ ಸಚದೇವ್, ಆಕೆಯ 12 ವರ್ಷದ ಸೋದರಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಬಾರ್ ಗರ್ಲ್ ನೀಡದ ದೂರಿನನ್ವಯ ಕಾರ್ಯಪ್ರವೃತ್ತರಾದ ಪೊಲೀಸರು ಸಚದೇವ್ ನನ್ನು ಬಂಧಿಸಿದ್ದಾರೆ. ಬಂಧಿತನಿಂದ 16 ಸಾವಿರ ರು. ನಗದು ಮತ್ತು ಮೊಬೈಲ್ ಫೋನನನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications