ಎಡ್ವರ್ಡ್ ನಂತರ ಯಾರೊಂದಿಗೂ ಸಂಭೋಗವಾಗಿಲ್ಲ: ಬಾಧಿತ ಗರ್ಭವತಿ

'ಮೈ ಲಾರ್ಡ್. ಆರೋಪಿ ಎಡ್ವರ್ಡ್ ಪರಿಸ್ಥಿತಿಯ ಸಂಪೂರ್ಣ ಪ್ರಯೋಜನ ಪಡೆದಿದ್ದಾನೆ. ಬಾಧಿತಳು ಒಬ್ಬಳೇ ಇದ್ದಳು. ಅದೂ ಮೈಮೇಲೆ ಪ್ರಜ್ಞೆಯಿಲ್ಲದೆ ಹಾಸಿಗೆ ಮೇಲೆ ಬಿದ್ದುಕೊಂಡಿದ್ದಳು. ಆಗ ಅವಳ ಬಟ್ಟೆ ಬಿಚ್ಚಿದ್ದಾನೆ. ಜತೆಗೆ ಸಂಭೋಗವನ್ನೂ ಮಾಡಿದ್ದಾನೆ. ಅದೂ ಕಾಂಡೋಮ್ ಇಲ್ಲದೆಯೇ!
ಸಾಲದು ಅಂತ ಮೊಬೈಲಿನಲ್ಲಿ ಅಲ್ಪಾವಧಿಯ ವಿಡಿಯೋ ಚಿತ್ರೀಕರಣವನ್ನೂ ಮಾಡಿದ್ದಾನೆ. ಅವಳು ಕಾಲುಗಳನ್ನು ಅಗಲಿಸಿಕೊಂಡು ಬಿದ್ದಿರುವ ಚಿತ್ರಗಳನ್ನು ಸಹ ತೆಗೆದಿದ್ದಾನೆ' ಎಂದು ಬಾಧಿತಳ ವಕೀಲ ಅಲೆಕ್ಸಿಯಾ ಪವರ್ ಸ್ವಾರಸ್ಯಕರವಾಗಿ ನ್ಯಾಯಾಲಯಕ್ಕೆ ಘಟನಾವಳಿಯನ್ನು ಕಟ್ಟಿಕೊಟ್ಟಿದ್ದಾರೆ.
'ಬಾಧಿತಳು ನ್ಯೂಯಾರ್ಕಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಸಂಭೋಗದ ಬಳಿಕ ಲಂಡನ್ನಿನಲ್ಲಿರುವ ಎಡ್ವರ್ಡ್ ಜತೆ ಸಂಪರ್ಕ ಇಟ್ಟುಕೊಂಡಿದ್ದಾಳೆ. ಆದರೆ ತಾನು ಗರ್ಭಿಣಿ ಎಂಬ ವಿಷಯ ಗೊತ್ತಾದಾಗಷ್ಟೇ ಸಂಭೋಗ ನಡೆದಿರುವುದು ಅವಳ ಅನುಭವಕ್ಕೆ ಬಂದಿರುವುದು. ತಕ್ಷಣ ತಡಮಾಡದೆ ಪೊಲೀಸರಿಗೆ ವಿಷಯ ತಿಳಿಸಿ, ಇದೀಗ ನ್ಯಾಯಾಲಯದ ಕಟಕಟೆಯಲ್ಲಿ ನಿಂತಿದ್ದಾಳೆ' ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.












Click it and Unblock the Notifications