ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಟೀವ್ ಜಾಬ್ಸ್ ಡೆತ್ ಸೆಕೆಂಡಿಗೆ ಹತ್ತು ಸಾವಿರ ಟ್ವಿಟ್

|
Google Oneindia Kannada News

Steve Jobs death 10,000 tweets per second
ಆಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ನಿಧನಕ್ಕೆ ಇಡೀ ಆನ್ ಲೈನ್ ಜಗತ್ತಿನ ಪ್ರತಿಕ್ರಿಯೆ ಹೊಸ ಇತಿಹಾಸ ಬರೆದಿದೆ. ಟ್ವಿಟ್ಟರ್ ಅಧಿಕೃತ ಅಂಕಿ ಅಂಶಗಳ ಪ್ರಕಾರ ಸ್ಟೀವ್ ಸಾವಿನ ನಂತರ ಪ್ರತಿಸೆಕೆಂಡಿಗೆ ಟ್ವಿಟ್ ಸಂಖ್ಯೆ 10 ಸಾವಿರಕ್ಕೆ ತಲುಪಿದೆ.

ಇಂತಹ ಟ್ವಿಟ್ ದಾಖಲೆ ನಡೆದ ದಾಖಲೆಯಿಲ್ಲ. ಇದು ಸ್ಟೀವ್ ಜಾಬ್ಸ್ ಜನಪ್ರಿಯತೆಯನ್ನೂ ಸಾರುತ್ತದೆ. ಆಪಲ್ ಕಂಪನಿ ಹುಟ್ಟು ಹಾಕುವ ಮೂಲಕ ಇಡೀ ಜಗತ್ತಿಗೆ ಹೊಸ ಸಂಗೀತ ಜಗತ್ತು ಕಟ್ಟಿಕೊಟ್ಟ ಸ್ಟೀವ್ ಸಾವು ಅನಿರೀಕ್ಷಿತವಾಗಿತ್ತು. ಇದಕ್ಕೆ ಟ್ವಿಟ್ ಮೂಲಕ ಅಸಂಖ್ಯಾತ ಜನರು ಪ್ರತಿಕ್ರಿಯಿಸಿದ್ದಾರೆ.

ಎಂಟಿವಿ ವಿಡಿಯೋ ಮ್ಯೂಸಿಕ್ ಅವಾರ್ಡ್ ನಲ್ಲಿ ಪಾಲ್ಗೊಂಡ ಬೇಯಾನ್ಸ್ ಕಾರ್ಯಕ್ರಮದಲ್ಲಿ ಆಕೆ ಗರ್ಭಿಣಿ ಎಂದು ತಿಳಿದಾಗ ಹಿಂದೊಮ್ಮೆ ಟ್ವಿಟ್ ದಾಖಲೆ ಸೃಷ್ಟಿಸಿತ್ತು. ಆಗ ಪ್ರತಿಸೆಕೆಂಡಿಗೆ 8,868 ಟ್ವಿಟ್ ದಾಖಲೆಯಾಗಿತ್ತು ಎಂದು ಸೋಸಿಯಲ್ ಮೀಡಿಯಾ ಕಂಪನಿ ಎಸ್ಆರ್7 ಮಾಹಿತಿ ನೀಡಿದೆ.

ಮಹಿಳಾ ಸಾಸರ್ ವಿಶ್ವಕಪ್ ಸಂದರ್ಭದಲ್ಲಿ ಅಮೆರಿಕವನ್ನು ಜಪಾನ್ ಹಿಮ್ಮೆಟ್ಟಿಸಿದಾಗ ಪ್ರತಿಸೆಕೆಂಡಿಗೆ 7,196 ಟ್ವಿಟ್ ದಾಖಲಾಗಿತ್ತು. ಒಸಮಾ ಬಿನ್ ಲಾಡೆನ್ ಸತ್ತಾಗ ಪ್ರತಿಸೆಕೆಂಡಿಗೆ ಟ್ವಿಟ್ ದಾಖಲೆ 5 ಸಾವಿರಕ್ಕೆ ತಲುಪಿತ್ತು ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.

ಕಳೆದ ಮಾರ್ಚ್ ತಿಂಗಳಲ್ಲಿ ಜಪಾನಿನಲ್ಲಿ ಭೂಕಂಪ ಮತ್ತು ಸುನಾಮಿ ಸಂಭವಿಸಿದಾಗ ಪ್ರತಿಸೆಕೆಂಡಿಗೆ 5,530 ಟ್ವಿಟ್ ದಾಖಲಾಗಿತ್ತು. ಬ್ರಿಟಿಷ್ ರಾಜಮನೆತನದ ಮದುವೆ ಸಂದರ್ಭದಲ್ಲಿ ಟ್ವಿಟ್ಟರ್ ನಲ್ಲಿ ಒಟ್ಟು ಪ್ರತಿಸೆಕೆಂಡಿಗೆ 3,966 ಟ್ವಟ್ ದಾಖಲಾಗಿತ್ತು. 2010ರಲ್ಲಿ ಪ್ರತಿಸೆಕೆಂಡಿಗೆ ಸರಾಸರಿ ಟ್ವಿಟ್ ಸಂಖ್ಯೆ 600 ಎಂದು ಟ್ವಿಟ್ಟರ್ ಹೇಳಿದೆ.

English summary
Apple co-founder Steve Jobs death also becomes a record breaking, as the twitter is receiving 10,000 tweets per second.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X