ವಿಶ್ವ ಶ್ರೇಷ್ಠ ಸಿಇಒ ಆರೇಕಲ್ ನ ಲ್ಯಾರಿ

Larry Ellison
6. ಲ್ಯಾರಿ ಎಲ್ಲಿಸನ್: 1977ರಲ್ಲಿ ಆರೇಕಲ್ ಸಾಫ್ಟ್ ವೇರ್ ಸಂಸ್ಥೆಯ ಸಹ ಸ್ಥಾಪಕನಾಗಿ ಸಾಫ್ಟ್ ವೇರ್ ಜಗತ್ತಿಗೆ ಕಾಲಿರಿಸಿದ ಉದ್ಯಮಿ ಲ್ಯಾರಿ ಕಣ್ಮುಂದೆ ಬೃಹತ್ ಸವಾಲುಗಳಿದ್ದವು.

ಐಬಿಎಂ ನಂಥ ಬೃಹತ್ ಕಂಪನಿಯ ಹಿಡಿತದಲ್ಲಿದ್ದ ಡಾಟಾಬೇಸ್ ಮ್ಯಾನೇಜ್ಮೆಂಟ್ ತಂತ್ರಜ್ಞಾನಕ್ಕೆ ಸವಾಲೊಡ್ಡುವ ಕೆಲಸವನ್ನು ಲ್ಯಾರಿ ಮಾಡಬೇಕಿತ್ತು. ಇನ್ಫೋರ್ಮಿಕ್ಸ್ ಹಾಗೂ ಸೈಬೇಸ್ ಸಹ ಪ್ರತಿಸ್ಪರ್ಧೆಯಲ್ಲಿತ್ತು. ಅರೇಕಲ್ ಗೆ ಮಾರುಕಟ್ಟೆ ಹಿಡಿತ ಸಿಗಬೇಕಾದರೆ 2000 ಇಸವಿ ತನಕ ಕಾಯಬೇಕಾಯಿತು.

2009ರಲ್ಲಿ 22.3 ಬಿಲಿಯನ್ ಡಾಲರ್, 2010ರಲ್ಲಿ 26.8 ಬಿಲಿಯನ್ ಗಳಿಸಿದ್ದ ಆರೇಕಲ್ ಇಂದು ವಿಶ್ವದ ಶ್ರೇಷ್ಠ ಕಂಪನಿಗಳಲ್ಲಿ ಒಂದು. ಲ್ಯಾರಿ ಎಲ್ಲಿಸನ್ 39.5 ಬಿಲಿಯನ್ ಡಾಲರ್ ಗಳಿಕೆ ಮೂಲದ ವಿಶ್ವದ ಅತ್ಯಂತ ದೊಡ್ಡ ಶ್ರೀಮಂತರ ಪಟ್ಟಿ ಸೇರಿದ್ದಾನೆ.

1990ರಲ್ಲಿ ಅನೆಕ ಉದ್ಯೋಗಿಗಳನ್ನು ನೌಕರಿಯಿಂದ ವಜಾ ಮಾಡಿ, ಸಂಸ್ಥೆ ಆರ್ಥಿಕ ಬಿಕ್ಕಟ್ಟು ಎದುರಿಸಿದಾಗ ಲ್ಯಾರಿ ನೆರವಿಗೆ ಬಂದ. ಸನ್ ಮೈಕ್ರೋಸಿಸ್ಟಮ್ ಖರೀದಿಸುವ ಇರಾದೆ ವ್ಯಕ್ತಪಡಿಸಿದ.

ನಂತರ ಯಾಚಿಂಗ್, ರೇಸಿಂಗ್, ಐಷಾರಾಮಿ ಕಾರು ಖರೀದಿ, ಎಚ್ ಪಿ ಸಿಇಒ ಮಾರ್ಕ್ ಹರ್ಡ್ ವಜಾ ಗೊಂಡಾಗ ಸಿಟ್ಟಿಗೆದ್ದು ನೀಡಿದ ಹೇಳಿಕೆ ಎಲ್ಲವೂ ಎಲ್ಲಿಸನ್ ಮಾತ್ರ ಮಾಡಲು ಸಾಧ್ಯ. $151,092,103 ಡಾಲರ್ ನಷ್ಟು ಹಣ ದಾನ ಧರ್ಮಕ್ಕೆ ವಿನಿಯೋಗಿ ಕೊಡುಗೈ ದಾನಿ ಎನಿಸಿದ ಲ್ಯಾರಿ ವೈವಿಧ್ಯಮಯ ಜೀವನ ಶೈಲಿ ಹೊಂದಿರುವ ಅಪರೂಪದ ಸಿಇಒ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+