ವಂಚಕ ಹಸನ್ ಅಲಿಯ ಸ್ವಯಂಘೊಷಿತ ಆಸ್ತಿ 1.1 ಲಕ್ಷ ಕೋಟಿ
ನವದೆಹಲಿ,
ಅ.4: ಪುಣೆಯ ಕುದುರೆ ಫಾರಂನ ಮಾಲಿಕ ಹಸನ್ ಅಲಿ ಖಾನ್ ಐದು ವರ್ಷಗಳ ಅವಧಿಯಲ್ಲಿ ತನ್ನ ಆಸ್ತಿಯನ್ನು 1.10 ಲಕ್ಷ ಕೋಟಿ ರೂಪಾಯಿಗಳು ಎಂದು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾನೆ. ಆದರೆ ತನ್ನ ಆದಾಯದ ಮೂಲಗಳನ್ನು ವಿವರಿಸಲು ವಿಫಲನಾಗಿರುವುದರಿಂದ ಅಲಿಗೆ ಬಾಂಬೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. id="toptextpromo">ಲಂಡನ್‌ನ
ಬರ್ಕ್ಲೆ ಬ್ಯಾಂಕ್‌ನಲ್ಲಿ ಏಳು ಲಕ್ಷ ಡಾಲರ್ ಠೇವಣಿ ಇಟ್ಟಿದ್ದ. ಹೈದರಾಬಾದ್‌ನ ನಿಜಾಮರಿಗೆ ಸೇರಿದ್ದು ಎನ್ನಲಾದ ಆಭರಣ ಮಾರಾಟದಿಂದ ಬಂದಿದ್ದ 30 ಸಾವಿರ ಡಾಲರ್ ಕಮಿಷನ್ ಹಣದ ರಸೀತಿ, ವಿದೇಶದ ವಿವಿಧ ಬ್ಯಾಂಕ್ ಖಾತೆಗಳಲ್ಲಿ ವ್ಯವಹಾರ ಮಾಡಿರುವುದು ಸಿಬಿಐ ತನಿಖೆ ಸಂದರ್ಭದಲ್ಲಿ ತಿಳಿದು ಬಂದಿದೆ. id='are-slot-1' class='oiad oi-axt oiadv'> id='top-searched-articles'>ಇಷ್ಟಾಗಿಯೂ
ಅಲಿ ತನ್ನ ಆದಾಯ ಮೂಲದ ಬಗ್ಗೆ ವಿವರಣೆ ನೀಡುತ್ತಿಲ್ಲ. ಈ ಮಾಹಿತಿಯನ್ನೆಲ್ಲ ಸಿಬಿಐ ಸುಪ್ರೀಂ ಕೋರ್ಟಿನ ಗಮನಕ್ಕೆ ತಂದ ನಂತರ ಆತನ ಜಾಮೀನನ್ನು ವಜಾ ಮಾಡಲಾಗಿದೆ.











Click it and Unblock the Notifications