69 ತಾಲೂಕುಗಳು ಬರಪೀಡಿತ : ಅಧಿಕೃತ ಘೋಷಣೆ

2004ರಲ್ಲಿ ಹೊರಡಿಸಲಾದ ಮಾರ್ಗಸೂಚಿಯನ್ವಯ ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಹಾಗೂ ಸತತ 4 ವಾರಗಳ ಕಾಲ ಒಣಹವೆ ಮುಂದುವರಿದಿರುವ ಪ್ರದೇಶವನ್ನು ಬರಪೀಡಿತವೆಂದು ಗುರುತಿಸಲಾಗುತ್ತದೆ. ಅದರಂತೆ ನೀರಾವರಿ ಅಚ್ಚುಕಟ್ಟು ಪ್ರದೇಶ ಹೊರತುಪಡಿಸಿ 69 ತಾಲೂಕುಗಳ ಉಳಿದ ಭಾಗವನ್ನು ಬರಪೀಡಿತ ಎಂದು ಘೋಷಿಸಲು ತೀರ್ಮಾನಿಸಲಾಯಿತು.
ಸದಾನಂದಗೌಡ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿ ಅಗತ್ಯಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಸಭೆ ನಡೆಸಿ ಬರ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಲಿದೆ. ಅಲ್ಲದೆ, ಕೇಂದ್ರಕ್ಕೆ ನೆರವು ಕೋರಿ ಮನವಿ ಸಲ್ಲಿಸಲು ಸಿದ್ಧತೆ ಮಾಡಲಾಗುತ್ತಿದೆ. ಬರಪೀಡಿತ ತಾಲೂಕುಗಳೂ ಸೇರಿ ರಾಜ್ಯದಲ್ಲಿ ಹಲವೆಡೆ ಕಳೆದ 3 ದಿನಗಳಿಂದ ಮಳೆಯಾಗುತ್ತಿದ್ದು, ಪರಿಸ್ಥಿತಿ ಸುಧಾರಿಸುವ ಲಕ್ಷಣ ಕಂಡುಬಂದಿದೆ.
ಕಳೆದ ಏಪ್ರಿಲ್‌ನಿಂದ ಈವರೆಗೆ ಬರಪರಿಹಾರ ಕಾಮಗಾರಿಗಳಿಗಾಗಿ 40 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಲಾದ 11 ಕೋಟಿ ರು., ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾದ 29 ಕೋಟಿ ರು. ಸೇರಿದೆ. ಜಿಲ್ಲಾಧಿಕಾರಿಗಳ ಪಿ.ಡಿ. ಅಕೌಂಟ್‌ನಲ್ಲಿ ಒಟ್ಟು 126 ಕೋಟಿ ರು. ಇದ್ದು, ಬರ ಪರಿಹಾರ ಕಾಮಗಾರಿಗಳಿಗೆ ಹಣಕಾಸಿನ ಕೊರತೆ ಇರುವುದಿಲ್ಲ.
ಮೇವು ಕೊರತೆಯಿರುವ ಚಿತ್ರದುರ್ಗ ಜಿಲ್ಲೆ ಸೇರಿ ಅಗತ್ಯವಿರುವ ಕಡೆ ಗೋಶಾಲೆ ಪ್ರಾರಂಭಿಸುವುದರ ಜೊತೆಗೆ ಮೇವನ್ನು ಕೊಂಡು ಸಾಗಣೆ ಹಾಗೂ ದಾಸ್ತಾನು ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚಿಸಲಾಗಿದೆ.
ಬರಪೀಡಿತ ಜಿಲ್ಲೆ ಹಾಗೂ ತಾಲೂಕುಗಳು:
| ಕ್ರಮ ಸಂಖ್ಯೆ | ಜಿಲ್ಲೆಯ ಹೆಸರು | ತಾಲೂಕಿನ ಹೆಸರು |
| 1 | ರಾಮನಗರ | 1. ಚನ್ನಪಟ್ಟಣ, 2. ಕನಕಪುರ |
| 2 | ಕೋಲಾರ | 1. ಬಂಗಾರಪೇಟೆ, 2. ಕೋಲಾರ, 3. ಶ್ರೀನಿವಾಸಪುರ |
| 3 | ಚಿಕ್ಕಬಳ್ಳಾಪುರ | 1. ಚಿಕ್ಕಬಳ್ಳಾಪುರ, 2. ಚಿಂತಾಮಣಿ, 3. ಗೌರಿಬಿದನೂರು |
| 4 | ತುಮಕೂರು | 1. ಕುಣಿಗಲ್, 2. ಪಾವಗಡ, 3. ಮಧುಗಿರಿ, 4. ಸಿರಾ, 5. ತುಮಕೂರು |
| 5 | ಚಿತ್ರದುರ್ಗ | 1. ಚಳ್ಳಕೆರೆ, 2. ಚಿತ್ರದುರ್ಗ, 3. ಹೊಸದುರ್ಗ, 4. ಮೊಳಕಾಲ್ಮೂರು |
| 6 | ಚಾಮರಾಜನಗರ | 1. ಚಾಮರಾಜನಗರ, 2. ಗುಂಡ್ಲುಪೇಟೆ, 3. ಕೊಳ್ಳೇಗಾಲ, 4. ಯಳಂದೂರು |
| 7 | ಮೈಸೂರು | 1. ಕೃಷ್ಣರಾಜನಗರ, 2. ನಂಜನಗೂಡು, 3. ತಿ. ನರಸೀಪುರ |
| 8 | ಮಂಡ್ಯ | 1. ಕೃಷ್ಣರಾಜಪೇಟೆ, 2. ಮದ್ದೂರು, 3. ಮಳವಳ್ಳಿ, 4. ಮಂಡ್ಯ, 5. ನಾಗಮಂಗಲ |
| 9 | ಬಳ್ಳಾರಿ | 1. ಬಳ್ಳಾರಿ, 2. ಹೊಸಪೇಟೆ, 3. ಹಗರಿಬೊಮ್ಮನಹಳ್ಳಿ, 4. ಕೂಡ್ಲಿಗಿ, 5. ಸಂಡೂರು, 6. ಶಿರಗುಪ್ಪ |
| 10 | ಕೊಪ್ಪಳ | 1. ಗಂಗಾವತಿ. 2. ಕೊಪ್ಪಳ, 3. ಕುಷ್ಟಗಿ, 4. ಯಲಬುರ್ಗ |
| 11 | ರಾಯಚೂರು | 1. ದೇವದುರ್ಗ, 2. ಲಿಂಗಸೂಗೂರು, 3. ಮಾನ್ವಿ, 4. ರಾಯಚೂರು, 5. ಸಿಂಧನೂರು |
| 12 | ಗುಲಬರ್ಗ | 1. ಅಪ್ಜಲ್‌ಪುರ, 2. ಆಳಂದ, 3. ಚಿಂಚೋಳಿ, 4. ಚಿತ್ತಾಪುರ, 5. ಗುಲ್ಬರ್ಗಾ, 6. ಜೇವರ್ಗಿ, 7. ಸೇಡಂ |
| 13 | ಯಾದಗಿರಿ | 1. ಶಹಾಪುರ, 2. ಸುರಪುರ |
| 14 | ಬೀದರ್ | 1. ಬೀದರ್ |
| 15 | ಬಾಗಲಕೋಟೆ | 1. ಬೀಳಗಿ, 2. ಜಮಖಂಡಿ, 3. ಮುಧೋಳ |
| 16 | ಬಿಜಾಪುರ | 1. ಬಸವನಬಾಗೇವಾಡಿ, 2. ಬಿಜಾಪುರ, 3. ಇಂಡಿ, 4. ಸಿಂಧಗಿ |
| 17 | ಗದಗ | 1. ಗದಗ, 2. ಮುಂಡರಗಿ |
| 18 | ಹಾಸನ | 1. ಅರಸಿಕೆರೆ, 2. ಚನ್ನರಾಯಪಟ್ಟಣ, 3. ಹಾಸನ, 4. ಹೊಳೆನರಸೀಪುರ |
| 19 | ಚಿಕ್ಕಮಗಳೂರು | 1. ಕಡೂರು |
| 20 | ಧಾರವಾಡ | 1. ನವಲಗುಂದ |












Click it and Unblock the Notifications