ರೆಡ್ಡಿ ಆಪ್ತ ಅಲಿ ಖಾನ್ ಲ್ಯಾಪ್ ಟಾಪ್ ಸಿಬಿಐ ಕೈಗೆ

ಬಳ್ಳಾರಿ, ಅ.2: ಅಕ್ರಮ ಗಣಿಗಾರಿಕೆ ಆರೋಪದಡಿ ಸಿಬಿಐ ವಿಚಾರಣೆಗೆ ಒಳಪಟ್ಟಿರುವ ಓಬಳಾಪುರಂ ಗಣಿ ಕಂಪನಿ ಮಾಲೀಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಆಪ್ತ ಸಹಾಯಕ ಅಲಿಖಾನ್‌ ಇನ್ನೂ ಪತ್ತೆಯಾಗಿಲ್ಲ. ಆದರೆ, ಅಲಿ ಖಾನ್ ಪರ್ಸನಲ್ ಲ್ಯಾಪ್ ಟ್ಯಾಪ್ ಈಗ ಸಿಬಿಐ ಕೈ ಸೇರಿದೆ.

ರೆಡ್ಡಿ ಬಲಗೈ ಬಂಟ ಅಲಿಖಾನ್ ಸೆ.5ರಿಂದ ನಾಪತ್ತೆಯಾಗಿದ್ದಾನೆ. ಈತನ ಪತ್ತೆಗೆ ತೀವ್ರ ಶೋಧ ನಡೆದಿದೆ. ಇತ್ತೀಚೆಗೆ ಬಳ್ಳಾರಿಯಲ್ಲಿ ಸಿಬಿಐ ತಂಡ ನಡೆಸಿದ ದಾಳಿಯಲ್ಲಿ ಅಲಿಖಾನ್ ಗೆ ಸೇರಿದ್ದ ದೇವಿ ಎಂಟರ್ ಪ್ರೈಸಸ್ ಕೂಡಾ ಸೇರಿತ್ತು.

ದಾಳಿ ಸಂದರ್ಭದಲ್ಲಿ ವಶಪಡಿಸಿಕೊಂಡ ವಸ್ತುಗಳಲ್ಲಿ ಅಲಿಖಾನ್ ಗೆ ಸೇರಿದ ಖಾಸಗಿ ಲ್ಯಾಪ್ ಟ್ಯಾಪ್ ಕೂಡಾ ಸಿಕ್ಕಿದೆ. ಲ್ಯಾಪ್ ಟಾಪ್ ನಲ್ಲಿರುವ ಮಾಹಿತಿಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಸಂಗ್ರಹಿಸಿದ ಮಾಹಿತಿಯೊಂದಿಗೆ ತಾಳೆ ಮಾಡಿ ನೋಡಲು ಸಿಬಿಐ ನಿರ್ಧರಿಸಿದೆ.

ಲ್ಯಾಪ್ ಟ್ಯಾಪ್ ನಲ್ಲಿ ಏನಿದೆ?:
ಕರ್ನಾಟಕ ಮತ್ತು ಆಂಧ್ರದ ಗಡಿಭಾಗದಲ್ಲಿ ನಡೆಸಲಾದ ಗಣಿ ಅಕ್ರಮಕ್ಕೆ ಕೈ ಜೋಡಿಸಿದ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು, ಸಾಮಾಜ ಘಾತುಕ ಶಕ್ತಿಗಳ ಜೊತೆಗಿನ ವ್ಯಾಪಾರ ವಹಿವಾಟು ಲೆಕ್ಕ ಇದೆ.

ಅದಿರು ಸಾಗಣೆ ವಿವರ, ರೆಡ್ಡಿಗಳ ಆಸ್ತಿ ವಿವರಗಳು ಸೇರಿದೆ ಎಂಬ ವದಂತಿ ಹಬ್ಬಿದೆ. ಸಿಬಿಐ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಲ್ಯಾಪ್ ಟಾಪ್ ನಲ್ಲಿರುವ ಮಾಹಿತಿಗಳು ಸತ್ಯವಾದರೆ ರೆಡ್ಡಿಗಳು ಜೈಲಿನಿಂದ ಹೊರಬೀಳುವುದು ತುಂಬಾ ಕಷ್ಟವಾಗುತ್ತದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+