ಕೈಕೊಟ್ಟ ಪ್ರೇಮಿಯನ್ನು ಇರಿದಿರಿದು ಸಾಯಿಸಿದ

lover-kills-girlfriend-stabbing-30-times-china
ಶಾಂಘೈ, ಅ.2‌ : ತನಗೆ ಮೋಸ ಮಾಡಿ, ಬೇರೊಂದು ಮದುವೆಗೆ ಸಿದ್ಧತೆ ನಡೆಸಿದ್ದ ನಲ್ಲೆಯನ್ನು 38 ವರ್ಷದ ಪಾಗಲ್ ಪ್ರೇಮಿಯೊಬ್ಬ ಬರೋಬ್ಬರಿ 30 ಬಾರಿ ಅವಳನ್ನು ತಿವಿದು ಸಾಯಿಸಿದ್ದಾನೆ. ಕೊನೆಗೆ ತನಗೆ ತಾನೇ ತಿವಿದುಕೊಂಡಾಗಲೇ ನಿಶೆ ಇಳಿದು, ಅವ ವಾಸ್ತವಕ್ಕೆ ಮರಳಿದ್ದು.

37 ವರ್ಷದ ಪ್ರೇಮಿ ರೆಸ್ಟಾರಂಟ್ ಒಂದರಲ್ಲಿ ಚೆನ್ ಹಾಯ್ ಹೂ ಎಂಬವಳ ಜತೆ ಕುಡಿತಕ್ಕೆ ಕುಳಿತ. ಆಸಾಮಿಗೆ ನಿಧಾನವಾಗಿ ನಶೆಯೇರುತ್ತಿದ್ದಂತೆ ಅವಳ ಇಡೀ ಮೈಯನ್ನು ತಿವಿದು ಬಿಸಾಕಿದ್ದಾನೆ. ಕುತ್ತಿಗೆ, ಎದೆ ಭಾಗ, ಸೊಂಟ, ಬೆನ್ನು ಹೀಗೆ ಸಿಕ್ಕ ಸಿಕ್ಕಲ್ಲೆಲ್ಲ ಅವಳನ್ನು ತರಿದುಹಾಕಿದ್ದಾನೆ. ತಕ್ಷಣ ಅವಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗೆ ಇಹಲೋಕ ತ್ಯಜಿಸಿದ್ದಳು.

ಪತ್ನಿಯಿಂದ ಡಿವೋರ್ಸ್ ಪಡೆದಿದ್ದ ಆರೋಪಿ ಅನ್ಹುಯಿ ಪ್ರಾಂತ್ಯದ ಗ್ರಾಮವೊಂದರಲ್ಲಿ ತನ್ನ ಪುತ್ರನೊಂದಿಗೆ ವಾಸವಾಗಿದ್ದ. ಮುಂದೆ, ಪ್ರವಾಸೋದ್ಯಮ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಚೆನ್ ಹಾಯ್ ಪ್ರೇಮಪಾಶದಲ್ಲಿ ಸಿಲುಕಿದ. ಇಬ್ಬರಿಗೂ ಸ್ನೇಹಸೇತುವೆಯಾಗಿದ್ದು ವೆಬ್‌ಸೈಟ್‌.

ಇಬ್ಬರ ನಡುವೆ ಪ್ರೀತಿ ಗಾಢವಾಯಿತಾದರೂ ಅದೊಂದು ದಿನ 'ನಾನು ಮತ್ತೊಬ್ಬನನ್ನು ಪ್ರೀತಿಸುತ್ತಿದ್ದೇನೆ. ಅವನೊಂದಿಗೆ ಮದ್ವೆನೂ ಆಗ್ತಿದೀನಿ' ಎಂದು ಚೆನ್ ಹಾಯ್ ಎಸ್ಎಂಎಸ್ ಕಳಿಸೇ ಬಿಟ್ಟಳು. ಇವನಿಗೋ ಪಿತ್ತ ನೆತ್ತಿಗೇರಿತು. ಬೇಡ ಕಣಮ್ಮಿ ಎಂದು ಪರಿಪರಿಯಾಗಿ ಬೇಡಿಕೊಂಡ.

ಅವಳದೋ ನಿರ್ಧಾರ ಗಟ್ಟಿಯಾಗಿತ್ತು. ಇನ್ನು ಪ್ರಯೋಜನವಿಲ್ಲ ಎಂದು ಬಗೆದವನೇ, ಮೆತ್ತಗೆ ಅವಳನ್ನು ಪುಸಲಾಯಿಸಿ, ಬಾರಿಗೆ ಕರೆದೊಯ್ದಿದ್ದಾನೆ. ಅಲ್ಲಿ ಪೂರ್ವನಿರ್ಧಾರದಂತೆ ಅವಳ ದೇಹವನ್ನು ಬಗೆದಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+