ಮೊಬೈಲ್ ಆನ್ ಮಾಡಿ ಆತ್ಮಹತ್ಯೆ ಮಾಡಿಕೊಂಡಳು
ಮುಂಬೈ,
ಸೆ. 29 : ಪ್ರೇಮ ವಿವಾಹದಿಂದ ಬೇಸತ್ತಿದ್ದ ಮಹಿಳೆಯೋರ್ವಳು ಮೊಬೈಲ್ ಕ್ಯಾಮೆರಾ ಆನ್ ಮಾಡಿಟ್ಟುಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನ ಅಂಧೇರಿಯಲ್ಲಿ ಜರುಗಿದೆ. ಆತ್ಮಹತ್ಯೆ ರೆಕಾರ್ಡ್ ಆಗಿರುವ ಮೊಬೈಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. id="toptextpromo">24
ವರ್ಷದ ನಿಧಿ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸಾವಿನ ಪತ್ರವನ್ನೂ ಬರೆದಿಟ್ಟಿದ್ದು, ಅದರಲ್ಲಿ ತನ್ನ ಸಾವಿಗೆ ಯಾರೂ ಹೊಣೆಗಾರರಲ್ಲ. ಮುಂದಿನ ಜನ್ಮವೊಂದಿದ್ದರೆ ಮತ್ತೆ ಇದೇ ಕುಟುಂಬದ ಸದಸ್ಯಳಾಗಿ ಹುಟ್ಟಬಯಸುತ್ತೇನೆ ಎಂದು ಬರೆದಿದ್ದಾಳೆ. id='are-slot-1' class='oiad oi-axt oiadv'> id='top-searched-articles'>ಉತ್ತರ
ಪ್ರದೇಶ ಮೂಲದ ನಿಧಿ ಮತ್ತು ಅದೇ ರಾಜ್ಯದ ಸಂದಾಶಿ (25) ಪ್ರೇಮ ವಿವಾಹವಾಗಿದ್ದರು. ಅವರಿಬ್ಬರು ಆಗಾಗ ಜಗಳಾಡುತ್ತಿದ್ದರು. ಇದರಿಂದ ನಿಧಿ ಖಿನ್ನತೆಗೆ ಜಾರಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಸಾವಿನ ಹಿಂದಿನ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಯೋಕೆ ಮುಂಚೆ ನಿಧಿ ಏನು ಹೇಳಿದ್ದಳು ಗೊತ್ತಾ?











Click it and Unblock the Notifications