ಕೊಪ್ಪಳ ಉಪಚುನಾವಣೆ: ಬಿಜೆಪಿಯ ಕರಡಿಗೆ ಗೆಲುವು

ಮೂರೂ ಪ್ರಮುಖ ಪಕ್ಷಗಳ ಮತ ಗಳಿಕೆ (12 ಗಂಟೆಯ ವೇಳೆಗೆ) ಹೀಗಿದೆ:
ಕರಡಿ ಸಂಗಣ್ಣ (ಬಿಜೆಪಿ) - 57,224
ಬಸವರಾಜ ಹಿಟ್ನಾಳ್ (ಕಾಂಗ್ರೆಸ್) - 44,979
ಪ್ರದೀಪ್ ಗೌಡ (ಜೆಡಿಎಸ್) - 19,339
ಆರಂಭದಿಂದಲೂ ಮುನ್ನಡೆ ಕಾದಿರಿಸಿಕೊಂಡ ಮಾಜಿ ಜೆಡಿಎಸ್ ಶಾಸಕ ಕರಡಿ ಸಂಗಣ್ಣ ಪ್ರಸಕ್ತ ಬಿಜೆಪಿ ಪರ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರ ವಿಜಯೋತ್ಸಾಹ ಎಲ್ಲೆಲ್ಲೂ ಕಂಡುಬಂದಿದೆ. ಜೆಡಿಎಸ್ ಪಕ್ಷಕ್ಕೆ ಫಲಿತಾಂಶ ತುಸು ಆಶ್ಚರ್ಯ ತಂದಿದೆ. ಏಕೆಂದರೆ ಜೆಡಿಎಸ್ಸನ್ನು ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ನೂಕಿದೆ. ಇನ್ನು, ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂತೆ ಪಕ್ಷೇತರರಾಗಿ ತಮ್ಮ ಅದೃಷ್ಟವನ್ನೂ ಪರೀಕ್ಷಿಸಿಕೊಳ್ಳಲು ಕಣಕ್ಕಿಳಿದಿದ್ದ 11 ಅಭ್ಯರ್ಥಿಗಳು ಬೋರ್ಡಿಗೂ ಇಲ್ಲದಂತಾಗಿದ್ದಾರೆ.












Click it and Unblock the Notifications