ಸಾಯೋಕ್ಕೆ ಮುಂಚೆ 'ನನ್ನ ಜತೆ ಮಾತಾಡೋ' ಎಂದಿದ್ದಳು

'ಕಳೆದ ಫೆಬ್ರವರಿಯಲ್ಲಿ ನಿನ್ನೊಂದಿಗೆ ನಡೆದ ಲವ್ ಮ್ಯಾರೇಜ್ ಬಗ್ಗೆ ನನಗೆ ಬಹಳಷ್ಟು ಪಶ್ಚಾತ್ತಾಪವಿದೆ. ಇದರಿಂದ ಮಾನಸಿಕ ಕ್ಷೋಭೆಗೊಳಗಾದೆ' ಎಂದೂ ಪುಣ್ಯಾತಗಿತ್ತಿ ಬರೆದಿಟ್ಟಿದ್ದಾಳೆ. ಅಂದಹಾಗೆ ಮೊಬೈಲಿನಲ್ಲಿ ಸರಿಯಾಗಿ 1.33 ನಿಮಷ ಕಾಲ ಅವಳ ನರಳಾಟ ದಾಖಲಾಗಿದೆ.
ಸಾಯುವುದಕ್ಕೂ ಮುನ್ನ ಮಂಗಳವಾರ ಬೆಳಗ್ಗೆ, ಆಫೀಸಿಗೆ ಹೊರಟು ನಿಂತ ಗಂಡನನ್ನು ತಡೆದು ನನ್ನೊಂದಿಗೆ ಒಂದು 10 ನಿಮಿಷ ಮಾತ್ನಾಡೋ ಎಂದು ಗೋಳಾಡಿದ್ದಾಳೆ. ಅವನೋ ಪಾಪ, ಆಯ್ತು ಎಂದು ಸಮಾಧಾನಪಡಿಸಿದ್ದಾನೆ. ಅಷ್ಟಾದರೂ ಮತ್ತೆ, ಆಫೀಸಿಗೆ ಹೋಗಬೇಡ ಎಂದು ವರಾತ ತೆಗೆದಿದ್ದಾಳೆ.
ಆದರೆ ಆಫೀಸಿಗೆ ಲೇಟ್ ಆಗ್ತಿದೆ ಎಂದು ಬೈ ಬೈ ಹೇಳುತ್ತಾ ಗಂಡ ಆಫೀಸು ತಲುಪಿಕೊಂಡಿದ್ದಾನೆ. ಆದರೂ ನಿಧಿ, 10 ಗಂಟೆಯ ವೇಳೆಗೆ 'ಕ್ಷಮಿಸು' ಎಂದು ಗಂಡನಿಗೆ ಎಸ್ಎಂಎಸ್ ಮಾಡಿದ್ದಾಳೆ.
ಅವನೋ ಆಫೀಸ್ ಬ್ಯುಸಿಯಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸ್ವಲ್ಪ ಹೊತ್ತಿನಲ್ಲೇ ಆತನ ಮಡದಿಯ ಸಾವಿನ ಸುದ್ದಿ ಅತನಿಗೆ ತಲುಪಿತು ಎಂದು ಪೂರ್ವ ಅಂಧೇರಿಯ ಇನ್ಸ್‌ಪೆಕ್ಟರ್ ಎಸ್. ಎಲ್. ಹುಜಬಂದ್ ತಿಳಿಸಿದ್ದಾರೆ.












Click it and Unblock the Notifications