ಅಕ್ರಮ ಗಣಿಗಾರಿಕೆ: ಗೋವಾ MLA ತಪ್ಪೊಪ್ಪಿಗೆ

ಗಣಿಧಣಿಗಳು ಹಾಗೂ ಶಾಸಕರ ನಡುವಿನ ಒಪ್ಪಂದದಂತೆ 1.3 ಮಿಲಿಯನ್ ಟನ್ ಗಳಿಗೂ ಅಧಿಕ ಕಬ್ಬಿಣದ ಅದಿರುಗಳನ್ನು ಗೋವಾದಿಂದ ರಫ್ತು ಮಾಡಲಾಗಿದೆ. ಈ ವಹಿವಾಟಿಗೆ ಯಾವುದೇ ರಾಜಧನ ನೀಡಿಲ್ಲ.
ಬಿಜೆಪಿಗೆ ಇರುಸು ಮುರುಸು: ಗಣಿಗಾರಿಕೆ ವಿಷಯದಲ್ಲಿ ತಪ್ಪು ಹೆಜ್ಜೆ ಇಟ್ಟಿದ್ದೇವೆ ಎಂದು ಬುಧವಾರ(ಸೆ.18)ರಂದು ಗೋವಾ ಬಿಜೆಪಿ ಗೋಳು ತೋಡಿಕೊಂಡಿತ್ತು.
ಮನೋಹರ್ ಪರ್ರಿಕಾರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಗಣಿಗಾರಿಕೆ ವಿಷಯದಲ್ಲಿ ನಿರ್ಲಕ್ಷ ತೋರಿದ್ದರು. ಗಣಿ ಸಚಿವರಾಗಿದ್ದ ದಿಗಂಬರ್ ಕಾಮತ್ ಅಕ್ರಮವಾಗಿ ದುಡ್ಡು ಸಂಪಾದಿಸಿದರು ಎಂದು ಬಿಜೆಪಿ ಹೇಳಿದೆ.
CAG ವರದಿ ಪ್ರಕಾರ 2004-2006ರ ಅವಧಿಯಲ್ಲಿ 10.9 ಮೆಟ್ರಿಕ್ ಟನ್ ಕಬ್ಬಿಣ ಅದಿರು ಅಕ್ರಮವಾಗಿ ರಫ್ತಾಗಿದೆ. ಆದರೂ, ಗಣಿ ಅಕ್ರಮದಲ್ಲಿ ಬಿಜೆಪಿ ಪಾಲು ಶೇ.20ರಷ್ಟಿದ್ದೆ ಮಿಕ್ಕಿದ್ದು ಕಾಂಗ್ರೆಸ್ ಪಕ್ಷಕ್ಕೆ ಸೇರಿದೆ ಎಂದು ಬಿಜೆಪಿ ಹೇಳುತ್ತಿದೆ.












Click it and Unblock the Notifications