ಮೆಡಿಕಲ್ ಚೆಕಪ್ ನೆಪದಲ್ಲಿ ಅಸಭ್ಯ ವರ್ತನೆ: ಹೆಡ್ಮಾಸ್ಟರ್ ಸೆರೆ

ಇಲ್ಲಿನ ಬಿಚ್ಕುರಿ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯ ಚಿಂತಾಮಣಿ ಮಿಶ್ರಾ ವೈದ್ಯಕೀಯ ತಪಾಸಣೆ ನಡೆಸಬೇಕಾಗಿದೆ ಎಂದು ಶಾಲೆಯ ಹೆಣ್ಣು ಮಕ್ಕಳಿಗೆ ಅವರವರ ಸಮವಸ್ತ್ರ ತೆಗೆಯುವಂತೆ ಆಜ್ಞಾಪಿಸಿದ್ದಾನೆ. 4 ಮತ್ತು 5 ನೇ ತರಗತಿಯ ಬಾಲಕಿಯರ ಜತೆ ವೈದ್ಯಕೀಯ ತಪಾಸಣೆ ನೆಪದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ಇಷ್ಟಕ್ಕೂ ಕಳೆದ ಶುಕ್ರವಾರ ಏನಾಯಿತೆಂದರೆ ನಾಲ್ಕು ಬಾಲಕಿಯರು ಹೊಟ್ಟೆ ತೊಳೆಸಿಕೊಂಡು ಬರುತ್ತಿದೆ. ಏನೋ ಒಂಥರಾ ಆಗ್ತಿದೆ ಎಂದು ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಬಳಿಕ ಮುಖ್ಯೋಪಾಧ್ಯಯರಲ್ಲಿ ದೂರು ಹೇಳಿಕೊಂಡಿದ್ದಾರೆ.
ಆಯ್ತು ಸ್ಕೂಲಿನಲ್ಲೇ ಇರಿ, ವೈದ್ಯಕೀಯ ತಪಾಸಣೆ ನಡೆಸೋಣ ಎಂದು ಹೇಳಿದ್ದಾರೆ. ಬಳಿಕ, ಅವರನ್ನು ಕರೆದು, 'ಅದೇನೋ ನೋಡೋಣ ಬನ್ನಿ. ಎಲ್ಲಿ ಎಲ್ಲ ಬಟ್ಟೆ ಕಳಚಿ' ಎಂದು ಹೇಳಿರುವುದಾಗಿ ಅಲಹಾಬಾದ್ ಇನ್ಸ್‌ಪೆಕ್ಟರ್ ಪ್ರಕಾಶ್ ನಾರಾಯಣ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಘಟನೆಯ ಬಗ್ಗೆ ಇಬ್ಬರು ಬಾಲಕಿಯರು ಹೆತ್ತವರ ಬಳಿ ಹೇಳಿಕೊಂಡಿದ್ದಾರೆ. ಗಾಬರಿಗೆ ಬಿದ್ದ ಅಪ್ಪ-ಅಮ್ಮ ಭಾನುವಾರ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು.












Click it and Unblock the Notifications