ಅಭಿರುಚಿಗೆ ತಕ್ಕ ಫೇಸ್ ಬುಕ್ ಅಪ್ಲಿಕೇಷನ್ AppFishing.com

Facebook app finder
ಚೆನ್ನೈ, ಸೆ. 28 : ಫೇಸ್ ಬುಕ್ ಬಳಕೆದಾರರ ಅಭಿರುಚಿ ಮತ್ತು ಅಗತ್ಯಗಳಿಗೆ ತಕ್ಕಂತೆ ಫೇಸ್ ಬುಕ್ ನಲ್ಲಿ ವಿವಿಧ ಅಪ್ಲಿಕೇಷನ್ ಗಳನ್ನು ಅಳವಡಿಸಿಕೊಳ್ಳುವುದು ಇನ್ನು ಸುಲಭ. ನೆಟ್ಟಿಗರ ಆಸಕ್ತಿಯನ್ನು ಕೆರಳಿಸುವಂಥ ಅಪ್ಲಿಕೇಷನ್ ಡೈರೆಕ್ಟರಿ AppFishing.comಯನ್ನು ಆರಂಭಿಸಲಾಗಿದೆ.

ಚೆನ್ನೈ ಮೂಲದ ಸ್ಟಾರ್ಟಪ್ ಕಂಪನಿ gBoom ಈ ಡೈರೆಕ್ಟರಿಯನ್ನು ಅಭಿವೃದ್ಧಿಪಡಿಸಿದ್ದು, ಫೇಸ್ ಬುಕ್ಕಿಗಳ ಅಭಿರುಚಿಗೆ ತಕ್ಕಂತಹ ನೂರಾರು ಅಪ್ಲಿಕೇಷನ್ ಗಳನ್ನು ನಿಮ್ಮ ಮುಂದೆ ತೆರೆದಿಡುತ್ತದೆ. ಇಲ್ಲಿ ತಮಾಷೆ, ಕ್ರಿಕೆಟ್, ಕಾಮಿಡಿ, ಪ್ರವಾಸ, ಭ್ರಷ್ಟಾಚಾರ ವಿರೋಧಿ, ಫೋಟೋಗ್ರಫಿ ಅಪ್ಲಿಕೇಷನ್ ಗಳಿವೆ.

ಸ್ನೇಹಿತರು ಬಳಸುತ್ತಿದ್ದಂತಹ ಅಪ್ಲಿಕೇಷನ್ ಗಳನ್ನೇ ಬಳಸುವ ಬದಲು ಫೇಸ್ ಬುಕ್ ಬಳಕೆದಾರ ತನಗಿಷ್ಟವಾದ ಮತ್ತು ವಿಶಿಷ್ಟಬಗೆಯ ಅಪ್ಲಿಕೇಷನ್ ಗಳನ್ನು ಇಷ್ಟಪಡುತ್ತಾನೆ. ಹೀಗಾಗಿ, ಫೇಸ್ ಬುಕ್ ನ ಭಾಗವಲ್ಲದಿದ್ದರೂ ಈ ಹೊಸ ತಂತ್ರಜ್ಞಾನವನ್ನು gBoom ಅಭಿವೃದ್ಧಿಪಡಿಸಿ ಫೇಸ್ ಬುಕ್ ಬಳಕೆದಾರರಿಗೆ ಅನುಕೂಲ ಮಾಡಿಕೊಟ್ಟಿದೆ ಅಂತಾರೆ gBoom ಸಿಇಓ ಪ್ರದೀಪ್ ವಿಜಯಕುಮಾರ್.

ಅಪ್ಲಿಕೇಷನ್ ಬಳಸುವುದು ಹೇಗೆ? : ಫೇಸ್ ಬುಕ್ ಅಕೌಂಟಿಗೆ ಲಾಗಿನ್ ಆದನಂತರ www.AppFishing.com ಕ್ಲಿಕ್ಕಿಸಿ ಅಪ್ಲೇಷನ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಆಗ ತೆರೆದುಕೊಳ್ಳುವ ಪುಟದಿಂದ ನಿಮ್ಮ ಅಭಿರುಚಿಯನ್ನು ತಣಿಸುವ ಅಪ್ಲಿಕೇಷನ್ ಆಯ್ದುಕೊಳ್ಳಿ. ಹಾಗೆಯೆ, ಫ್ಯಾನ್ ಆಫ್ ದಟ್ಸ್ ಕನ್ನಡ ಸ್ನೇಹಿತರಾಗುವುದು ಮರೆಯಬೇಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+