ಗೋಹತ್ಯೆ ಶಿಕ್ಷೆ 6 ತಿಂಗಳಿಂದ 7 ವರ್ಷಕ್ಕೆ ಏರಿಕೆ

ಗುಜರಾತ್‌ನಲ್ಲಿ ಈ ಹಿಂದೆ ಗೋ ಹತ್ಯೆ ನಡೆಸಿದ ಆರೋಪಿಗಳಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು. ಗುಜರಾತ್ ವಿಧಾನ ಸಭೆಯ ಮಳೆಗಾಲದ ಅಧಿವೇಶನದಲ್ಲಿ ಮಂಡಿಸಲಾದ ಮಸೂದೆಗೆ ಕಾಂಗ್ರೆಸ್ ಪಕ್ಷವೂ ಸಹ ಬೆಂಬಲ ಸೂಚಿಸಿದ್ದರಿಂದ ಮಸೂದೆ ಯಾವುದೇ ವಿರೋಧವಿಲ್ಲದೇ ಅಂಗೀಕಾರವಾಯಿತು.
ಗುಜರಾತ್ ಪ್ರಾಣಿ ಸಂರಕ್ಷಣೆ (ತಿದ್ದುಪಡಿ) ಮಸೂದೆಯಲ್ಲಿ ಗೋಮಾಂಸ ಸಾಗಿಸುವ ವಾಹನವನ್ನು ಪ್ರಕರಣದ ವಿಚಾರಣೆ ಮುಗಿಯುವವರೆಗೂ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡಲಾಗಿದೆ.
ಹತ್ಯೆಗಾಗಿ ಅಥವಾ ಗೋಮಾಂಸ ಸಂಗ್ರಹಣೆ, ಮಾರಾಟ ಉದ್ದೇಶದಿಂದ ಗೋವುಗಳನ್ನು ಸಾಗಿಸುವ ವಾಹನಗಳ ಮಾಲೀಕರಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications