ಮೋದಿ ಉಪವಾಸದ ಲೆಕ್ಕ ಕೇಳಿದ ರಾಜ್ಯಪಾಲೆ ಕಮಲಾ

ಈ ಮಧ್ಯೆ, ಮೂರು ದಿನಗಳ ಮೋದಿ ಉಪವಾಸಕ್ಕೆ ತಗುಲಿರುವ ವೆಚ್ಚವನ್ನು ವಸೂಲು ಮಾಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ.
ನಿನ್ನೆಯಷ್ಟೇ ಸಿಎಂ ಮೋದಿ ಅವರು ರಾಜ್ಯಪಾಲರ ಮೂಲಕ ಕೇಂದ್ರ ಸರಕಾರ ರಾಜ್ಯದಲ್ಲಿ ಪರ್ಯಾಯ ಆಡಳಿತ ನಡೆಸುತ್ತಿದೆ ಎಂದು ಕಿಡಿಕಾರಿದ್ದರು. ಮಾಜಿ ಮುಖ್ಯಮಂತ್ರಿ ಸುರೇಶ್ ಮೆಹ್ತಾ, ಗೃಹ ಸಚಿವ ಗೋವರ್ಧನ್ ಜಡಾಪಿಯಾ ಮತ್ತಿತರ ಕಾರ್ಯಕರ್ತರು ಸಿಎಂ ಮೋದಿಯ ಸದ್ಭಾವನಾ ಉಪವಾಸಕ್ಕೆ ಖಜಾನೆಯಿಂದ ಹಣ ಬಿಡುಗಡೆ ಮಾಡಲು ಅನುಮತಿ ನೀಡಿದ್ದಾದರೂ ಏಕೆ? ಮತ್ತು ಯಾರು ಎಂಬುದನ್ನು ಬಹಿರಂಗಪಡಿಸುವಂತೆ ಕೇಳಿದ್ದರು.
ಗುಜರಾತ್ ವಿಶ್ವವಿದ್ಯಾಲಯ 'ಉಚಿತ ಚಿಂತನೆ'ಯ ಫಲವಾಗಿ ತನ್ನ ಏರ್ ಕಂಡೀಷನ್ ಕಟ್ಟಡವನ್ನು ಮುಖ್ಯಮಂತ್ರಿಯ ಉಪವಾಸಕ್ಕಾಗಿ ಉಚಿತವಾಗಿ ನೀಡಿತ್ತು ಎಂಬುದು ಗಮನಾರ್ಹ. ಸಾಮಾನ್ಯವಾಗಿ ಈ ಕಟ್ಟಡದ ದೈನಂದಿನ ಬಾಡಿಗೆ 5 ಲಕ್ಷ ರೂ. ಇರುತ್ತದೆ. ಅಂದರೆ 3 ದಿನಗಳಿಗೆ 15 ಲಕ್ಷ ರೂಪಾಯಿ.












Click it and Unblock the Notifications