ಯೋಗೇಶ್ವರನಿಗೆ ಮುಳುವಾದ ಸಿಐಡಿ ಚಾರ್ಜ್ ಶೀಟ್

1995-2006ರ ಮಧ್ಯೆ ಮೆಗಾ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಯೋಜನೆಯಲ್ಲಿ ಖಾಸಗಿ ಟೌನ್‌ಶಿಪ್ಪೊಂದರಲ್ಲಿ ಸೈಟುಗಳನ್ನು ನೀಡುವುದಾಗಿ ಭಾರೀ ಸಂಖ್ಯೆಯ ಹೂಡಿಕೆದಾರರಿಗೆ 40 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಂಚನೆ ಪ್ರಕರಣದಲ್ಲಿ ಸಿಐಡಿ 2010ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿತ್ತು
ಇದಲ್ಲದೆ, ಬಿಡದಿ ಸಮೀಪದ ಅರ್ಚಕರಹಳ್ಳಿಯಲ್ಲಿ ವಜ್ರಗಿರಿ ಟೌನ್ ಶಿಪ್ ಗಾಗಿ ರೈತರ ಫಲವತ್ತಾದ ಬೆಲೆಬಾಳುವ ಖರೀದಿಸಿ, ಪರಿಹಾರ ನೀಡಿಲ್ಲ
ಆಸ್ತಿ ವಿವರ: 2006-07ರಲ್ಲಿ ಶಾಸಕರಾಗಿದ್ದ ಯೋಗೇಶ್ವರ್, 35.82 ಲಕ್ಷ ರೂ ಆಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ವಿವರಣೆ ಸಲ್ಲಿಸಿದ್ದರು.
ಆದರೆ, ಚನ್ನಪಟ್ಟಣ ವಿಧಾನ ಸಭೆ ಉಪಚುನಾವಣೆ ಸಂದರ್ಭದಲ್ಲಿ ತಮ್ಮ ಆಸ್ತಿ ವಿವರವನ್ನು 3.24 ಕೋಟಿ ರು ಎಂದು ಘೋಷಿಸಿದ್ದರು.
ನಾಲ್ಕೈದು ವರ್ಷಗಳಲ್ಲಿ ಲಕ್ಷದಿಂದ ಕೋಟಿ ರೂ ಗಳಿಸಿದ್ದಾದರೂ ಹೇಗೆ ಎಂದು ಪ್ರಶ್ನಿಸಲಾಗಿದೆ.












Click it and Unblock the Notifications