ಯೋಗೇಶ್ವರನ ಮೇಲೆ FIR ದಾಖಲಿಸಲು ಸಿದ್ಧತೆ

ಹೆಚ್ಚಿನ ಆಸ್ತಿ ಗಳಿಕೆ, ಸುಳ್ಳು ಪ್ರಮಾಣಪತ್ರ ಸಲ್ಲಿಕೆ, ವಂಚನೆ ಆರೋಪ ಹೊತ್ತಿರುವ ಯೋಗೇಶ್ವರ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಂ 13(c) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಚಿವರ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕೂಡಾ ಗ್ರೀನ್ ಸಿಗ್ನಲ್ ನೀಡಿದ್ದಾರೆ. ರವೀಂದ್ರ ಬೆಳೆಯೂರು ಎಂಬುವರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರು ಮುಂದಾಗಿದ್ದಾರೆ.
ಸಿಪಿ ಯೋಗೇಶ್ವರ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರ, ಲೋಕಾಯುಕ್ತ ಸಂಸ್ಥೆ ನೀಡಿರುವ ಆಸ್ತಿ ವಿವರ, ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ಟ್ಯಾಕ್ಸ್ ರಿಟರ್ನ್ಸ್ ಪ್ರತಿ, ಕೇಂದ್ರ ಸರ್ಕಾರ ಕಾರ್ಪೋರೇಟ್ ವ್ಯವಹಾರ ಇಲಾಖೆಯಿಂದ ಸಿಕ್ಕಿರುವ ಮಾಹಿತಿ ಎಲ್ಲವನ್ನೂ ಲೋಕಾಯುಕ್ತ ಪೊಲೀಸರು ಕಲೆ ಹಾಕಿದ್ದಾರೆ.
ಅಸ್ತಿ ವಿವರದಲ್ಲಿ ನೀಡಿರುವ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಕೆಎಸ್ ಐಸಿ ಅಧ್ಯಕ್ಷರಾಗಿದ್ದಾಗ ನಡೆಸಿದ ವ್ಯವಹಾರಗಳ ದಾಖಲೆಗಳನ್ನು ಕೂಡಾ ಲೋಕಾಯುಕ್ತ ಪೊಲೀಸರು ಪರಿಶೀಲಿಸುವ ಸಾಧ್ಯತೆಯಿದೆ.
ಸಿಐಡಿ ವರದಿ ಪ್ರಮುಖ ಆಧಾರವಾಗಲಿದೆ? ವರದಿಯಲ್ಲಿ ಏನಿದೆ..?












Click it and Unblock the Notifications