ಪ್ರಕೃತಿ ವಿಸ್ಮಯ : ಬೇವಿನ ಮರ ಹಾಲು ಸುರಿಸುತ್ತಿದೆ?

Milk oozing from neem tree
ಗುಂಡ್ಲುಪೇಟೆ, ಸೆ. 26 : ಕಳೆದ ಒಂದು ವಾರದಿಂದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೆಳವಾಡಿ-ಶೆಟ್ಟಹಳ್ಳಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿರುವ ಬೇವಿನ ಮರವೊಂದು ಧಾರಾಕಾರವಾಗಿ ಹಾಲ್ನೊರೆ ಸುರಿಸುತ್ತಿದೆ. ವೈಜ್ಞಾನಿಕವಾಗಿ ಇದರ ಹಿಂದೆ ಏನೂ ಅಡಗಿದೆಯೋ ಗೊತ್ತಿಲ್ಲ. ಆದರೆ ಸುತ್ತ ಮುತ್ತಲಿನ ಜನರು ಮಾತ್ರ ಇದನ್ನು ನೋಡಿ ಭಾವಪರವಶಗೊಂಡು ಪೂಜೆ ಸಲ್ಲಿಸುತ್ತಿದ್ದಾರೆ.

ಈ ಸುದ್ದಿ ಒಬ್ಬರ ಬಾಯಿಯಿಂದ ಮತ್ತೊಬ್ಬರ ಬಾಯಿಗೆ ಹರಡಿ ಸುತ್ತಮುತ್ತಲಿನ ಜನರು ತಂಡೋಪ ತಂಡವಾಗಿ ಬೆಳವಾಡಿ-ಶೆಟ್ಟಹಳ್ಳಿ ಗ್ರಾಮದ ಮಧ್ಯ ಭಾಗದಲ್ಲಿರುವ ನಂಜಪ್ಪ ಎಂಬುವವರ ಜಮೀನಿನಲ್ಲಿ ನೆರೆದು ಬೇವಿನ ಮರಕ್ಕೆ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸುತ್ತಿದ್ದಾರೆ. ಜನ ಮರುಳೋ ಜಾತ್ರೆ ಮರುಳೋ?

ಈ ಬೇವಿನ ಮರವನ್ನು ನಂಜಪ್ಪನವರು ಕಳೆದ ಏಳು ವರ್ಷಗಳ ಹಿಂದೆ ನೆಟ್ಟಿದ್ದು, ಎಲ್ಲಾ ಮರಗಳು ಬೆಳೆಯುವಂತೆಯೇ ಇದು ಕೂಡ ಜಮೀನಿನಲ್ಲಿ ಬೆಳೆಯತೊಡಗಿತ್ತು. ಆದರೆ ಕಳೆದ ಒಂದು ವಾರದಿಂದ ಈ ಮರದ ರೆಂಬೆಯ ಸಣ್ಣ ರಂಧ್ರದಿಂದ ಹಾಲು ನೊರೆ ಉಕ್ಕಿ ಬರುವಂತೆ ಬಿಳಿ ಬಣ್ಣದ ದ್ರವ ಹರಿದು ಬರುತ್ತಿದೆ.

ಮೊದಲ ಬಾರಿಗೆ ನೋಡಿದವರು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇದರಿಂದ ಧಾರಾಕಾರವಾಗಿ ಹಾಲ್ನೊರೆ ಹರಿಯತೊಡಗಿದಾಗ ಜನ ಅಚ್ಚರಿಗೊಂಡಿದ್ದಾರೆ. ಇದು ಯಾವುದೋ ದೇವರ ಪವಾಡ ಎಂದರಿತ ಜನ ಬೇವಿನ ಮರಕ್ಕೆ ಪೂಜೆ ಸಲ್ಲಿಸಿ ಕೈಮುಗಿಯುತ್ತಿದ್ದಾರೆ. ಬೇವಿನ ಮರ ದೇವರ ಮರವಾಗಿ ಬದಲಾಗಿದೆ. ಮರದಿಂದ ಬಿಳಿದ್ರವ ಸುರಿಯುವುದನ್ನು ಹತ್ತಿರದಿಂದ ನೋಡಿದ ಕೆಲವರು ಕಥೆ ಕಟ್ಟತೊಡಗಿದ್ದಾರೆ. ಆ ಬಗ್ಗೆ ಸಸ್ಯಶಾಸ್ತ್ರಜ್ಞರು ಏನು ಹೇಳುತ್ತಾರೊ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+