ತಿವಾರಿಯೇ ರೋಹಿತನ ಪಿತಾಮಹ: ದೆಹಲಿ ಹೈಕೋರ್ಟ್

ತಿವಾರಿಯೇ ರೋಹಿತ್ ಶೇಖರ್‌ನ ತಂದೆ ಎನ್ನುವುದಕ್ಕೆ ಬಲವಾದ ಸಾಕ್ಷಿಗಳಿವೆ ಎಂದಿರುವ ಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎನ್‌ಎ ಪರೀಕ್ಷೆ ಗೆ ಹಾಜರಾಗಬೇಕೆಂದು ತಾನು ತಿವಾರಿಯವರನ್ನು ಒತ್ತಾಯಿಸುವುದಿಲ್ಲ ಎಂದೂ ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಿದ ತಿವಾರಿ ವಕೀಲರು ವಯೋವೃದ್ಧರಾಗಿರುವ ತಿವಾರಿಯವರನ್ನು ಡಿಎನ್‌ಎ ಪರೀಕ್ಷೆಯ ಹಿನ್ನೆಲೆಯಲ್ಲಿ ರಕ್ತ ಪರೀಕ್ಷೆಗೆ ಒತ್ತಾಯಿಸುವುದಾಗಲಿ ಅಥವಾ ಮಂಪರು ಪರೀಕ್ಷೆ ಒಳಪಡಿಸುವುದಾಗಲಿ ಸಲ್ಲದೆಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ. 1ಕ್ಕೆ ಕೋರ್ಟ್‌ನ ಜಂಟಿ ಆಯುಕ್ತರೆದುರು ಹಾಜರಾಗಿ ಡಿಎನ್‌ಎ ಪರೀಕ್ಷೆಗಾಗಿ ರಕ್ತದ ಮಾದರಿ ನೀಡಬೇಕೆಂಬ ನ್ಯಾಯಾಲಯದ ಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿ ತಿವಾರಿ ಅರ್ಜಿ ಸಲ್ಲಿಸಿದ್ದರು.












Click it and Unblock the Notifications