ಟೆಕ್ಕಿ ಶ್ವೇತಕ್‌ ಪಟೇಲ್‌ ಈಗ 'ಜೀನಿಯಸ್‌ ಫೆಲೊ'

Shwetak Naran Patel with wife Julie Anne Kientz
ನ್ಯೂಯಾರ್ಕ್, ಸೆ.21: ಭಾರತೀಯ ಮೂಲದ ಅಮೆರಿಕದ ಕಂಪ್ಯೂಟರ್ ವಿಜ್ಞಾನಿ ಶ್ವೇತಕ್‌ ನಾರನ್ ಪಟೇಲ್‌ಗೆ ಅಮೆರಿಕದ ಪ್ರತಿಷ್ಠಿತ 'ಮ್ಯಾಕ್‌ಆರ್ಥರ್ ಫೆಲೊಷಿಪ್' ಲಭಿಸಿದೆ. 29ರ ಹರೆಯದ 'ಜೀನಿಯಸ್‌ ಫೆಲೋ' ಶ್ವೇತಕ್‌ ಇಂಧನ ಉಳಿತಾಯ ಹಾಗೂ ದೈನಂದಿನ ಜೀವನವನ್ನು ಸುಧಾರಿಸುವ ಗುರಿಯೊಂದಿಗೆ ಮನೆಯ ವಾತಾವರಣಕ್ಕೆ ಪೂರಕವಾದ ಸರಣಿ ಸೆನ್ಸಾರ್ ತಂತ್ರಜ್ಞಾನ ವ್ಯವಸ್ಥೆಗಳ ಅನ್ವೇಷಣೆ ಕೈಗೊಂಡಿದ್ದರು.

ಈ ಪ್ರಶಸ್ತಿಗೆ ಪಾತ್ರರಾದ 22 ಯುವ ವಿಜ್ಞಾನಿಗಳ ಪೈಕಿ ಪಟೇಲ್‌ ಒಬ್ಬರಾಗಿದ್ದು, ಪ್ರತಿಯೋರ್ವರಿಗೂ ಪ್ರಶಸ್ತಿ ಪತ್ರದೊಂದಿಗೆ 5ಲಕ್ಷ ಡಾಲರ್ (2.4 ಕೋಟಿ ರೂ.) ಮೊತ್ತ ನಗದು ರೂಪದಲ್ಲಿ ದೊರೆಯಲಿದೆ. ಯಾವುದೇ ಕ್ಷೇತ್ರದಲ್ಲಿ ಸರ್ವೋತ್ಕೃಷ್ಟ ಸಂಶೋಧನೆ, ಅಭಿವೃದ್ಧಿ ನಡೆಸಿದ 20-40 ಮಂದಿಗೆ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುವುದು.

ಶ್ವೇತಕ್‌, ಅಲಾಬಾಮಾದಲ್ಲಿರುವ ನಾರನ್ ಮತ್ತು ಕುಸುಮ್ ಪಟೇಲ್ ಅವರ ಪುತ್ರ. ಇವರಿಗೆ ಶ್ರೇಯಸ್ ಎಂಬ ಸೋದರ ಮತ್ತು ಶ್ವೇತಾ ಎಂಬ ಸೋದರಿ ಇದ್ದಾರೆ. ಜೂಲಿ ಅನೆ ಕೀಂಟ್ಸ್ ಇವರ ಪತ್ನಿ.

ಈ ಪ್ರಶಸ್ತಿಗೆ ಅರ್ಹರ ಹೆಸರುಗಳನ್ನು ಅಘೋಷಿತ ಆಯ್ಕೆ ಸಮಿತಿಯು ಅತ್ಯಂತ ಗುಪ್ತವಾಗಿ ನಾಮಕರಣ ಮಾಡಿತ್ತು. ಪ್ರಶಸ್ತಿಗೆ ಭಾಜನರಾಗುತ್ತೇವೆ ಎಂಬ ಸಣ್ಣ ಸುಳಿವು ಸಹ ವಿಜೇತರಿಗೆ ಸಿಕ್ಕಿರಲಿಲ್ಲ. ಪ್ರಶಸ್ತಿ ಘೋಷಣೆಗೂ ಕೆಲವೇ ತಾಸುಗಳ ಮುನ್ನವಷ್ಟೇ ಚೀನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಪಟೇಲ್‌ ನ್ಯೂಯಾರ್ಕ್‌ಗೆ ಮರಳಿದ್ದರು.

ಜಾರ್ಜಿಯಾ ತಾಂತ್ರಿಕ ಶಿಕ್ಷಣ ಸಂಸ್ಥೆಯಿಂದ ಬಿಎಸ್‌ ಹಾಗೂ ಪಿಎಚ್‌ಡಿ ಪದವಿ ಪಡೆದಿರುವ ಪಟೇಲ್‌ ಅವರು 2008ರಿಂದ ವಾಷಿಂಗ್ಟನ್‌ ವಿವಿಯ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಹಾಗೂ ವಿದ್ಯುನ್ಮಾನ ಎಂಜಿನಿಯರಿಂಗ್‌ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+