CM ಸದಾನಂದ ಗೌಡ ಇಡೀ ದಿನ ಏನು ಮಾಡುತ್ತಾರೆ!?

ಸದಾನಂದಗೌಡರ ದಿನಚರಿ ಹೀಗಿದೆ ನೋಡಿ. ಬೆಳಗ್ಗೆ 5 ಕ್ಕೆ ನಿದ್ದೆಯಿಂದ ಏಳುವ ಗೌಡರು ನಿತ್ಯಕರ್ಮಗಳನ್ನು ಮುಗಿಸಿದ ನಂತರ 6.30 ರವರೆಗೆ ದಿನಪತ್ರಿಕೆಗಳನ್ನು ತಿರುವಿ ಹಾಕುತ್ತಾರೆ. ನಂತರ 8 ಗಂಟೆವರೆಗೆ ತಮ್ಮನ್ನು ಕಾಣಲು ಬಂದ ಜನರನ್ನು ಭೇಟಿ ಮಾಡುತ್ತಾರೆ.
ಬಳಿಕ ಮತ್ತಷ್ಟು ಸಿದ್ಧತೆಗಳೊಂದಿಗೆ 10 ಗಂಟೆ ಹೊತ್ತಿಗೆ ತಮ್ಮ ನಿವಾಸದಿಂದ ಹೊರಟು ಗೃಹ ಕಚೇರಿ 'ಕೃಷ್ಣಾ' ತಲುಪುತ್ತಾರೆ. ಅಲ್ಲಿ ಗಣ್ಯರ ಜೊತೆಗೆ ಜನತಾ ದರ್ಶನಕ್ಕೆ ಆಗಮಿಸುವ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ನಂತರ ನಿಗದಿತ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಾರೆ.
ಮಧ್ಯಾಹ್ನ ಭೋಜನದ ನಂತರ ತಮ್ಮ ನಿವಾಸ ಅಥವಾ ಗೃಹ ಕಚೇರಿಯಲ್ಲಿ ಕಡತಗಳ ಪರಿಶೀಲನೆ. ಇದರ ಮಧ್ಯೆ ಗಣ್ಯರ ಭೇಟಿ. ರಾತ್ರಿವರೆಗೂ ಗೃಹ ಕಚೇರಿಯಲ್ಲೇ ಕಡತ ವಿಲೇವಾರಿ, ಅಧಿಕಾರಿಗಳೊಂದಿಗೆ ಸಭೆ ವಗೈರೆ ....
ಕೆಲವೊಮ್ಮೆ ತಡರಾತ್ರಿವರೆಗೆ ಕಾರ್ಯನಿರ್ವಹಿಸುವುದೂ ಉಂಟು. ಜನತಾದರ್ಶನ ಕಾರ್ಯಕ್ರಮವಿಲ್ಲದಿದ್ದರೂ, ಪ್ರತಿದಿನವೂ ದೂರದ ಊರುಗಳಿಂದ ಬರುವ ಕನಿಷ್ಠ 250ರಿಂದ 300 ಜನರನ್ನು ಭೇಟಿ ಮಾಡಿ ಅವರ ಕಷ್ಟ ಸಂಕಷ್ಟಗಳಿಗೆ ಸ್ಪಂದಿಸುತ್ತಾರೆ.











Click it and Unblock the Notifications