ಬ್ರೆಜಿಲ್ ಜೈಲಿನಲ್ಲಿ ಯುವತಿ ಮೇಲೆ ಸರಣಿ ಅತ್ಯಾಚಾರ

ಘಟನೆ ವಿವರ ತಿಳಿದ ಮೇಲೆ ಸ್ಥಳೀಯ ಸರ್ಕಾರ ಜೈಲು ವಾರ್ಡನ್ ಹಾಗೂ 20 ಗಾರ್ಡ್ ಗಳನ್ನು ಸೇವೆಯಿಂದ ಅಮಾನತುಗೊಳಿಸಿದೆ. ಈ ಕಾಮಕೂಪದಲ್ಲಿ ಇನ್ನೂ ಕೆಲ ಹುಡುಗಿಯರು ಸಿಲುಕಿರುವ ಬಗ್ಗೆ ಕೂಡಾ ಸುಳಿವು ಸಿಕ್ಕಿದೆ. ನನ್ನನ್ನು ಎಷ್ಟು ಜನ ಹರಿದು ಮುಕ್ಕಿದರೋ ನೆನಪಿಲ್ಲ ಎಂದು ಹುಡುಗಿ ಹೇಳಿಕೊಂಡಿದ್ದಾಳೆ.
ಸ್ಥಳೀಯ ಬೆಲೆಮ್ ಬೀಚ್ ವೊಂದರಲ್ಲಿ ಕುಳಿತ್ತಿದ್ದ ನನ್ನನ್ನು ಮಹಿಳೆಯೊಬ್ಬಳು ಸಂಪರ್ಕಿಸಿ, ಸಾಂಟಾ ಇಜಬೆಲ್ ಪ್ರದೇಶದಲ್ಲಿ ಮನೆಕೆಲಸ ಕೊಡಿಸುವುದಾಗಿ ಆಸೆ ತೋರಿಸಿದಳು. ನನ್ನ ಜೊತೆಗೆ ಇನ್ನೂ ಕೆಲ ಹುಡುಗಿಯರಿದ್ದರು ಎಲ್ಲರನ್ನೂ ಸ್ಥಳೀಯ ಜೈಲಿಗೆ ಕರೆದೊಯ್ದು ಚೆನ್ನಾಗಿ ಮದ್ಯ ಕುಡಿಸಲಾಯಿತು.
ಡ್ರಗ್ಸ್ ಸಹ ದೇಹಕ್ಕೆ ಸೇರಿದ ಮೇಲೆ ಅನೇಕ ಜನರ ಲೈಂಗಿಕ ತೃಪ್ತಿಗೆ ನಾವು ಬಲಿಯಾದೆವು. ಅಲ್ಲಿಂದ ತಪ್ಪಿಸಿಕೊಂಡ ಮೇಲೆ ಪೊಲೀಸರ ಮೊರೆ ಹೋದೆ ಎಂದು ನೊಂದ ಹುಡುಗಿ ತನ್ನ ಕಥೆ ಹೇಳಿದ್ದಾಳೆ. ಈ ಬಗ್ಗೆ ತನಿಖೆ ಮುಂದುವರೆದಿದೆ. ಹುಡುಗಿಯರಿಗೆ ಕೆಲಸ ಆಸೆ ತೋರಿದ ಮಹಿಳೆಯ ಸುಳಿವು ಸಿಕ್ಕ ನಂತರ ಪ್ರಕರಣವನ್ನು ಜಾಲಾಡಿ ಬಿಡುತ್ತೇವೆ ಎಂದು ಇನ್ಸ್ ಪೆಕ್ಟರ್ ಫ್ಯಾಬಿಯನೋ ಅಮಾಜೊನಾಸ್ ಹೇಳಿದ್ದಾರೆ.











Click it and Unblock the Notifications