ಕಾರಿನಲ್ಲಿ ಬಾಲಕನ ಜತೆ ಚಕ್ಕಂದ: ಮಹಿಳೆಗೆ ಜೈಲು

sex-with-teen-in-car-woman-jailed
ಲಂಡನ್, ಸೆ.2‌0: ಇಂಟರ್ನೆಟ್‌ ಮೂಲಕ 15 ವರ್ಷದ ಬಾಲಕನ ಸಂಗಕ್ಕೆ ಬಿದ್ದ ಮಷಿಗನ್ ಮಹಿಳೆಯೊಬ್ಬಳು, ಮುಂದೆ ಮುಖತಃ ಭೇಟಿಯಾದಾಗ ಕಾರಿನಲ್ಲಿ ಅವನೊಂದಿಗೆ ಚಕ್ಕಂದ ನಡೆಸಿದ ಆರೋಪದ ಮೇಲೆ 7 ವರ್ಷದ ಜೈಲುಶಿಕ್ಷೆಗೆ ಗುರಿಯಾಗಿದ್ದಾಳೆ.

35 ವರ್ಷದ ಏಂಜಿ ಜೆಂಕಿನ್ಸ್ ಹದಿಹರಯದ ಹುಡುಗನ ಜತೆ ಸ್ನೇಹ ಬೆಳೆಸಿದ್ದಳು. ಬಾಲಕನ ಕಾಮಪಾಶಕ್ಕೆ ಸಿಕ್ಕಿದ ಮಹಿಳೆ, 2010ರಲ್ಲಿ ಅದಕ್ಕಾಗಿ ಬಫೆಲ್ಲೋ ನಗರಕ್ಕೆ ಬಂದಿದ್ದಳು. ಆದರೆ, ಬಾಲಕನ ಮೊಬೈಲಿಗೆ ಬೇರೆ ರಾಜ್ಯದಿಂದ ಒಂದೇ ಸಮನೆ ಮೊಬೈಲ್ ಕರೆಗಳು ಬರುವುದನ್ನು ಸೂಕ್ಷ್ಮವಾಗಿ ಗಮನಿಸಿದ ಪೋಷಕರು ಪೊಲೀಸರಿಗೆ ಸುಳಿವು ನೀಡಿದರು.

ಎಚ್ಚೆತ್ತ ಪೊಲೀಸರು ಕಾರ್ಯಾಚರಣೆಗೆ ಇಳಿದರು. ಜೆಂಕಿನ್ಸ್ ಬಯಕೆಯಂತೆ ಬಾಲಕ ಅವಳಿಗೆ ಅಸಂಖ್ಯಾತ ಅಶ್ಲೀಲ ಚಿತ್ರ ಕಳಿಸಿರುವುದನ್ನು ಪತ್ತೆಹಚ್ಚಿದರು. 'ನೀನೆಂದರೆ ನನಗೆ ಪಂಚಪ್ರಾಣ. ನೀನು ನನ್ನ ಬಗ್ಗೆ ಅಪಾರ ಕಾಳಜಿ ಹೊಂದಿರುವುದರಿಂದ ನೀನು ನನಗೆ ತುಂಬಾ ಇಷ್ಟ ಆಗ್ತಿಯಾ. ನೀನು ನನಗಾಗಿ ಏನೆಲ್ಲ ಮಾಡುವೆಯೋ ಅದೆಲ್ಲವೂ ನನಗೆ ಪಸಂದಾಗಿದೆ' ಎಂದು ಬಾಲಕನಿಗೆ ಅವಳು ಎಸ್ಎಂಎಸ್ ಕಳಿಸಿರುವುದನ್ನೂ ಪೊಲೀಸರು ಪತ್ತೆಹಚ್ಚಿದರು.

ಪೋಷಕರು ಜೆಂಕಿನ್ಸ್ ಳ ಕರೆಗಳನ್ನು ಬಂದ್ ಮಾಡಿದ್ದರೂ ಅವಳು ಬಾಲಕನ ಹಿಂದೆಯೇ ಬಿದ್ದಿದ್ದಳು. ಅನ್ಯಮಾರ್ಗ ಕಾಣದೆ ಅವನಿಗೆ ಹೊಚ್ಚಹೊಸ ಮೊಬೈಲು ಕೊಡಿಸಿದಳು. ಅಕ್ರಮ ಸಂಪರ್ಕವನ್ನು ಮುಂದುವರಿಸಿಯೇ ಇದ್ದಳು. ವನ್ ಫೈನ್ ಡೆ, ಬಾಲಕನನ್ನು ತನ್ನ ಕಾರಿನಲ್ಲಿ ಎತ್ತಿಹಾಕಿಕೊಂಡು ಹೋದವಳೆ ಮಳಿಗೆಯೊಂದರ ಪಾರ್ಕಿಂಗ್ ಲಾಟಿನಲ್ಲಿ ಅವನೊಂದಿಗೆ ಚಕ್ಕಂದ ಆಡಿಯೇ ಬಿಟ್ಟಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+