ಮೆಟ್ರೋ ಓಡೋಕೆ ಮುಂಚೆ ಬಿಎಂಟಿಸಿ ಬಿಡ್ತಾರಂತೆ

ಬಹುಶಃ ಸೆಪ್ಟೆಂಬರ್ ಕೊನೆಯ ವಾರ(ಸೆ.26?) ನಮ್ಮ ಮೆಟ್ರೋ ಸಂಚಾರ ಆರಂಭವಾಗಬಹುದು. ರೈಲ್ವೇ ಇಲಾಖೆ ಸುರಕ್ಷಿತಾ ಪತ್ರ ಕೈ ಸೇರುವುದು ತಡವಾಗಿದ್ದು, ಉದ್ಘಾಟನೆಗೆ ವಿಳಂಬ ಎಂದು ಸದಾನಂದ ಗೌಡರ ಸರ್ಕಾರ ಹೇಳುತ್ತಿದೆ.
ಫೀಡರ್ ಸೇವೆ ಆರಂಭ: ಮೆಟ್ರೋ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ದಿನವೊಂದಕ್ಕೆ ಫೀಡರ್ ಬಸ್‌ಗಳ 1200 ಟ್ರಿಪ್ ಸುತ್ತಲಿದೆ. ಭೈಯಪ್ಪನಹಳ್ಳಿಯಿಂದ ಎಂ.ಜಿ ರಸ್ತೆಯವರೆದಿನ ಮೊದಲ ಹಂತದಲ್ಲಿ ಬರುವ ಎಲ್ಲಾ 6 ನಿಲ್ದಾಣಗಳಿಂದಲೂ ಫೀಡರ್ ಬಸ್ ಸಂಚರಿಸಲಿವೆ.
6 ಕಿಲೋಮೀಟರ್ ಸುತ್ತಳತೆಯಲ್ಲಿ 36 ಫೀಡರ್ ಬಸ್‌ಗಳು ರೈಲು ಪ್ರಯಾಣಕ್ಕೆ ಪೂರಕವಾಗಿ ಚಲಿಸಲಿದೆ.
ಈಗಾಗಲೇ ಫೀಡರ್ ಬಸ್‌ಗಾಗಿ 24 ರೂಟ್‌ಗಳನ್ನು ಗುರುತಿಸಲಾಗಿದೆ. 64 ಬಸ್‌ಗಳು ದಿನವೊಂದಕ್ಕೆ 1200 ಟ್ರಿಪ್ ಸಂಚರಿಸುವಂತೆ ಯೋಜನೆ ರೂಪಿಸಲಾಗಿದೆ. ಬೇಡಿಕೆಗೆ ತಕ್ಕಂತೆ ಬಸ್ ಒದಗಿಸಲಾಗುವುದು ಎಂದು ಬಿಎಂಟಿಸಿ ಹೇಳಿದೆ.
ಎಂ.ಜಿ. ರಸ್ತೆ, ಟ್ರಿನೀಟಿ ಸರ್ಕಲ್, ಅಲಸೂರು, ಇಂದಿರಾನಗರ, ವಿವೇಕಾನಂದ ರಸ್ತೆ ಹಾಗೂ ಭೈಯಪ್ಪನಹಳ್ಳಿ ನಿಲ್ದಾಣಗಳಿಗೆ ಹಾಗೂ ಅಂದಿನಿಂದಲೇ ಫೀಡರ್ ಬಸ್ ಸೇವೆಯೂ ಲಭ್ಯ
ಈಗಾಗಲೇ ಬೆಳ್ಳಿ ಬಣ್ಣದ ಪಿಂಕ್ ಪಟ್ಟಿಯುಳ್ಳ ಫೀಡರ್ ಬಸ್ ಗಳು ಹೈಕೋರ್ಟ್, ಮ್ಯಾಜೆಸ್ಟ್ರೇಟ್ ಕೋರ್ಟ್ ಹಾಗೂ ಸಿವಿಲ್ ಕೋರ್ಟ್‌ಗಳ ನಡುವೆ ರೌಂಡ್ ಹೊಡೆಯುತ್ತಿದೆ.
ಫೀಡರ್ ಬಸ್ ಟಿಕೆಟ್ ದರ 4 ರೂ. ಮಾತ್ರ.












Click it and Unblock the Notifications