ಯೋಗೀಶ್ವರ್ ಮೆಗಾಸಿಟಿ ಡೆವಲಪರ್ಸ್ ಮೆಗಾ ಕಥೆ ಏನು?

ಈ ಯೋಜನೆಯಲ್ಲಿ ಸಾವಿರಾರು ಮಂದಿ ಹೂಡಿಕೆದಾರರಿಗೆ 37 ಕೋಟಿ ರೂ.ಗಳನ್ನು ವಂಚಿಸಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಸಿಐಡಿ ಪೊಲೀಸರು 2010ರಲ್ಲಿ ಯೋಗೀಶ್ವರ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಎಸ್‌ಎಫ್‌ಐಒ ಅಧಿಕಾರಿಗಳು ಮೆಗಾಸಿಟಿ ವಂಚನೆ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ್ದು, 2500 ಪುಟಗಳ ತನಿಖಾ ವರದಿಯನ್ನು ಆಗಸ್ಟ್ ಎರಡನೆ ವಾರದಲ್ಲೆ ಕೇಂದ್ರ ಕಂಪನಿ ವ್ಯವಹಾರಗಳ ಇಲಾಖೆಗೆ ಸಲ್ಲಿಸಿದ್ದು, ವರದಿಯಲ್ಲಿ ಯೋಗೀಶ್ವರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿಯಲ್ಲಿ ಹಣ ದುರುಪಯೋಗ, ಸುಳ್ಳು ಕ್ರಯ ಪತ್ರಗಳ ಸೃಷ್ಟಿ, ವಂಚನೆ ಸೇರಿದಂತೆ ಹಲವು ಗುರುತರ ಆರೋಪಗಳನ್ನು ಹೊರಿಸಲಾಗಿದೆ ಎನ್ನಲಾಗಿದೆ.
ಬಿಜೆಪಿ ಹೈಕಮಾಂಡ್ ಯೋಗೀಶ್ವರ್ ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಅಭಿಪ್ರಾಯ ತಿಳಿಸುವಂತೆ ಕೋರಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.












Click it and Unblock the Notifications