ಸಚಿವ ಯೋಗೀಶ್ವರ್ ಸಹ ಸದ್ಯದಲ್ಲೇ ಜೈಲು ಪಾಲು?
ಬೆಂಗಳೂರು,
ಸೆ.14: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯನಾಯ್ಡು, ಜನಾರ್ದನ ರೆಡ್ಡಿ ವಿರುದ್ಧದ ಭ್ರಷ್ಟಾಚಾರ, ಹಗರಣಗಳ ಆರೋಪಗಳಿಂದಾಗಿ ಈಗಾಗಲೆ ಹಲವು ಬಾರಿ ಮುಜುಗರಕ್ಕೊಳಗಾಗಿರುವ ಬಿಜೆಪಿ, ಇದೀಗ, ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್ ಅವರ ಮೆಗಾಸಿಟಿ ವಂಚನೆ ಪ್ರಕರಣದಿಂದ ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆಯಿದೆ. id="toptextpromo">ಮೆಗಾಸಿಟಿ
(ಬೆಂಗಳೂರು) ಡೆವಲಪರ್ಸ್ ಮತ್ತು ಬಿಲ್ಡರ್ಸ್ ಲಿಮಿಟೆಡ್‌ನ ನಿವೇಶನ ಹಂಚಿಕೆ ಹಗರಣದ ರೂವಾರಿಯಾಗಿ, ಸಾವಿರಾರು ಮಂದಿಗೆ ವಂಚಿಸಿರುವ ಆರೋಪ ಎದುರಿಸುತ್ತಿರುವ ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್ ವಿರುದ್ಧದ ತನಿಖಾ ವರದಿಯು ಕೇಂದ್ರ ಕಂಪನಿ ವ್ಯವಹಾರಗಳ ಇಲಾಖೆಯ ಕೈ ಸೇರಿದ್ದು, ರಾಷ್ಟ್ರಮಟ್ಟದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ರೂಪಿಸಲು ಮುಂದಾಗಿರುವ ಬಿಜೆಪಿ ನಾಯಕರಿಗೆ ಅವರದೆ ಪಕ್ಷದವರಿಂದ ಮತ್ತೊಮ್ಮೆ ಇರಸುಮುರಸು ಉಂಟಾಗುವಂತಾಗಿದೆ. id='are-slot-1' class='oiad oi-axt oiadv'> id='top-searched-articles'>ಕೇಂದ್ರ
ಕಂಪನಿ ವ್ಯವಹಾರ ಇಲಾಖೆಯ ಗುರುತರ ವಂಚನೆಗಳ ತನಿಖಾ ವಿಭಾಗವು (ಎಸ್‌ಎಫ್‌ಐಒ) ಸಿ.ಪಿ. ಯೋಗೀಶ್ವರ್ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮೆಗಾಸಿಟಿ (ಬೆಂಗಳೂರು) ಡೆವಲಪರ್ಸ್ ಮತ್ತು ಬಿಲ್ಡರ್ಸ್ ಲಿಮಿಟೆಡ್, 450 ಸುಳ್ಳು ಕ್ರಯಪತ್ರ (ಸೇಲ್ ಅಗ್ರಿಮೆಂಟ್)ಗಳನ್ನು ಸೃಷ್ಟಿಸಿ, ಮೆಗಾಸಿಟಿ ಯೋಜನೆ ವ್ಯಾಪ್ತಿಯಲ್ಲಿನ ಭೂ ಮಾಲೀಕರಿಗೆ 37 ಕೋಟಿ ರೂ.ಗಳನ್ನು ವಂಚಿಸಿರುವ ಆರೋಪದ ಕುರಿತು ತನಿಖೆ ನಡೆಸಿ, ವರದಿಯನ್ನು ಸಿದ್ಧಪಡಿಸಿದೆ.











Click it and Unblock the Notifications