ತೈಲವಿಲ್ಲದೆ ಚಲಿಸುವ ಯಂತ್ರ : ಉಡುಪಿ ವಿದ್ಯಾರ್ಥಿ ಸಾಧನೆ

Karthik from Udupi
ಉಡುಪಿ, ಸೆ.14 : ಭವಿಷ್ಯದಲ್ಲಿ ತೈಲವಿಲ್ಲದೆಯೇ ಯಂತ್ರಗಳನ್ನು ನಡೆಸಲು ಸಾಧ್ಯ. ಇಂಥ ಸಾಧ್ಯತೆಯನ್ನು ಮಾಡಿ ತೋರಿಸಿದ್ದಾನೆ ಉಡುಪಿಯ ಕೋಟತಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಕಾರ್ತಿಕ್.

ಈತನ ಮಾದರಿ ಪ್ರಕಾರ ಡೀಸೆಲ್‌, ಪೆಟ್ರೋಲ್‌ ಇಲ್ಲದಿದ್ದರೂ ಜೆಸಿಬಿ ಯಂತ್ರವನ್ನು ಚಾಲನೆ ಮಾಡಬಹುದು. ಅಂದರೆ 'ಹೈಡ್ರಾಲಿಕ್‌ ಜೇಸಿಬಿ' ಪರಿಹಾರ! ಹೊಸದಿಲ್ಲಿಯಲ್ಲಿ ಆ.14ರಿಂದ 16ರವರೆಗೆ ನಡೆದ ರಾಷ್ಟ್ರೀಯ ವಿಜ್ಞಾನ ಮಾದರಿ ಪ್ರದರ್ಶನ, ಪ್ರಾತ್ಯಕ್ಷಿಕೆಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಿಯಾಗಿದ್ದಾನೆ.

ಸೋಮವಾರ ಉಡುಪಿ ಜಿ.ಪಂ.ನಲ್ಲಿ ಈತನ ಸಾಧನೆಗೆ ಸನ್ಮಾನ ನೀಡಲಾಯಿತು. ಜೆಸಿಬಿ ಮಾದರಿಯನ್ನು ಚಾಲನೆಗೊಳಿಸಿದ ಕಾರ್ತಿಕ್‌ ಜಿ.ಪಂ. ಸದಸ್ಯರನ್ನು ಆಶ್ಚರ್ಯಚಕಿತರನ್ನಾಗಿಸಿದ. ಪಾತ್ರೆಯಲ್ಲಿದ್ದ ಮಣ್ಣನ್ನು ತೆಗೆದು ಇನ್ನೊಂದು ಕಡೆಗೆ ಜೆಸಿಬಿ ಹಾಕಿತು. ಕಾರ್ತಿಕ್‌ ನಿರ್ಮಿಸಿರುವ ಈ ಹೈಡ್ರಾಲಿಕ್‌ ಜೆಸಿಬಿಯ ಪ್ರಮುಖ ಭಾಗವು 8 ಸಿರೆಂಜ್‌ ಮತ್ತು 4 ಡ್ರಿಪ್ಸ್ ಪೈಪ್‌ಗಳಿಂದಾಗಿದೆ.

ನೀರನ್ನು ಬಳಸಿ ಇದರ ಚಾಲನೆಯಾಗುತ್ತದೆ. ಹೊಸದಿಲ್ಲಿ ಮತ್ತು ಬೆಂಗಳೂರಿನ ವಿಜ್ಞಾನ ಮತ್ತು ತಂತ್ರಜ್ಞಾ ಇಲಾಖೆ ಈ ಸ್ಪರ್ಧೆಯನ್ನು ಆಯೋಜಿಸಿತ್ತು. ಇದರಲ್ಲಿ ಕರ್ನಾಟಕದಿಂದ 74 ಮಂದಿ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಉಡುಪಿ ಜಿ.ಪಂ. ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಅವರು ಬಾಲಪ್ರತಿಭೆಯನ್ನು ಅಭಿನಂದಿಸಿದರು. ಶಾಸಕ ಗೋಪಾಲ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+