ಕರಾವಳಿಯಲ್ಲಿ ಬಸ್ ಪ್ರಯಾಣ ದರ ಏರಿಕೆಗೆ ಅಸ್ತು

ಹೊಸ ದರಗಳು ಸೆ. 15ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿವೆ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ಕೆ. ರಾಜವರ್ಮ ಬಲ್ಲಾಳ್ ಮತ್ತು ಪ್ರಧಾನ ಕಾರ್ಯದರ್ಶಿ ಪಿ. ಭಾಸ್ಕರ ಸಾಲ್ಯಾನ್ ತಿಳಿಸಿದ್ದಾರೆ.
ಪ್ರಯಾಣ ದರ ಪರಿಷ್ಕರಿಸುವಾಗ ಮೊದಲ ಎರಡು ಸ್ಟೇಜ್‌ಗಳಿಗೆ (0.1ರಿಂದ 6.50 ಕಿ.ಮೀ. ಮತ್ತು 6.6 ಕಿ.ಮೀ. ನಿಂದ 13 ಕಿ.ಮೀ.ವರೆಗೆ) ಈ ಹಿಂದೆ ಇದ್ದ ರೂ. 5 (ಕನಿಷ್ಠ ದರ) ಮತ್ತು ರೂ. 9ನ್ನು ಉಳಿಸಿಕೊಳ್ಳಲಾಗಿದೆ. ಆನಂತರದ ಸ್ಟೇಜ್‌ಗಳಲ್ಲಿ 50 ಪೈಸೆಯಿಂದ ಕ್ರಮವಾಗಿ 1, 2, 2.50, 3 ರೂ.ವರೆಗೆ ಏರಿಕೆಯಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸರ್ವೀಸ್ ಮತ್ತು ಎಕ್ಸ್‌ಪ್ರೆಸ್ ಬಸ್ಸುಗಳ ಸಮಾಂತರವಾಗಿ ಸಂಚಾರ ನಡೆಸುತ್ತಿದ್ದು, ಉಡುಪಿ ಸಾರಿಗೆ ಪ್ರಾಧಿಕಾರದಿಂದಲೂ ಸೆ. 15ರಿಂದಲೇ ಈ ದರಗಳು ಜಾರಿಯಾಗುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications