ದಸರಾಕ್ಕೆಮೈಸೂರು ವಿಮಾನ ನಿಲ್ದಾಣ ಸ್ಪೈಸಿ

ಅಕ್ಟೋಬರ್ ವೇಳೆಗೆ ಸ್ಪೈಸ್ ಜೆಟ್ ವಿಮಾನಗಳು ಚೆನ್ನೈ ನಿಂದ ಬೆಂಗಳೂರು ಮಾರ್ಗವಾಗಿ ಮೈಸೂರು ತಲುಪಲಿದೆ.
ಮೈಸೂರಲ್ಲಿ ವಿಮಾನಕ್ಕೆ ಡಿಮ್ಯಾಂಡ್?:72 ಸೀಟುಗಳ ಕಿಂಗ್ ಫಿಷರ್ ವಿಮಾನ ಸದಾ ಬುಕ್ ಆಗಿರುತ್ತದೆ. ವಾರಾಂತ್ಯದಲ್ಲಿ ಸೀಟು ಸಿಗುವುದೇ ಕಷ್ಟ.
ವಿಮಾನ ನಿಲ್ದಾಣ ಎರಡನೇ ಹಂತದ ವಿಸ್ತರಣೆ ಕಾರ್ಯ ಆರಂಭವಾಗಿದ್ದು 240 ಎಕರೆ ಸ್ವಾದೀನ ಪಡಿಸಿಕೊಳ್ಳಲಾಗಿದೆ. ಸುಮಾರು 200 ಕೋಟಿ ರು ವೆಚ್ಚದಲ್ಲಿ ವಿಮಾನ ನಿಲ್ದಾಣದ ಮೂಲ ಸೌಕರ್ಯಗಳ ಸುಧಾರಣೆ ಮಾಡಲಾಗುತ್ತದೆ.
ಏರ್ ಟ್ರಾಫಿಕ್ ಕಂಟ್ರೋಲ್ ಟವರ್, ಹವಾಮಾನ ಇಲಾಖೆ, ಟರ್ಮಿನಸ್ ಸುಧಾರಣೆ ಮುಂತಾದ ಕಾಮಗಾರಿ ಆರಂಭವಾಗಿದೆ. 1740 ಮೀಟರ್ ಇರುವ ರನ್ ವೇಗೆ ಇನ್ನೂ 500 ಮೀಟರ್ ಸೇರಿಸಲಾಗುತ್ತದೆ.
ಮೈಸೂರು ನಂಜನಗೂಡು ಹೆದ್ದಾರಿ ಅಡ್ಡ ಬರುವುದರಿಂದ ಎರಡನೇ ಹಂತದ ಕಾಮಗಾರಿ ವಿಳಂಬವಾಗಿದೆ ಎಂದು ಮಂಜುನಾಥ್ ಹೇಳಿದ್ದಾರೆ.












Click it and Unblock the Notifications